ಅರಸೀಕೆರೆ ಪೊಲೀಸ್ ವಸತಿಗೃಹದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಜಯ್ ಕೃಷ್ಣ ಸಸಿ ನೆಟ್ಟು ನೀರು ಹಾಕಿದರು.
ಹರಪನಹಳ್ಳಿ: ನಾಡಿನ ಉಳಿವಿಗಾಗಿ ದೇಶದ ಪ್ರತಿಯೊಬ್ಬ ಪ್ರಜೆ ಕಾಡನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಪಿಎಸ್‌ಐ ವಿಜಯ್ ಕೃಷ್ಣ ಹೇಳಿದರು.
ಅರಸೀಕೆರೆ ಪೊಲೀಸ್ ವಸತಿಗೃಹದ ಆವರಣದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಸಿಗಳನ್ನು ಹೆಚ್ಚು ನೆಡುವುದರಿಂದ ಆಮ್ಲಜನಕ ಹೇರಳವಾಗಿ ಸಿಗುತ್ತದೆ. ಇದರೊಂದಿಗೆ ಮಣ್ಣಿನ ಸಂರಕ್ಷಣೆ, ಜೀವ ವೈವಿಧ್ಯ ಸಂರಕ್ಷಣೆ, ಹವಾಮಾನ ನಿಯಂತ್ರಣವೂ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸೀಕೆರೆ ಮೇಲ್ವಿಚಾರಕ ಪ್ರಶಾಂತ್ ಡಿ.ಶೆಟ್ಟಿ, ಪೊಲೀಸ್ ಇಲಾಖೆಯ ಕೂಲಹಳ್ಳಿ ಕೊಟ್ರೇಶ್, ಹರೀಶ್ ದೇವರಹಟ್ಟಿ, ಮಹಾಂತೇಶ್, ಸೇವಾಪ್ರತಿನಿಧಿ ಪೂಜಾರ್ ದುರುಗಪ್ಪ, ಕೆ.ಮಹಾಂತೇಶ್, ನಾಗರಾಜ್ ಇತರರಿದ್ದರು.