ಚಿಪ್ಸ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ

ಪಿಲ್ಲೋಬನಹಳ್ಳಿ-ಮಾದೂರು ಮಾರ್ಗದಲ್ಲಿ ಚಿಪ್ಸ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿರುವುದು.
ಪಿಲ್ಲೋಬನಹಳ್ಳಿ-ಮಾದೂರು ಮಾರ್ಗದಲ್ಲಿ ಚಿಪ್ಸ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿರುವುದು.
Published on
ಹಗರಿಬೊಮ್ಮನಹಳ್ಳಿ: ಪಿಲ್ಲೋಬನಹಳ್ಳಿ-ಮಾದುರು ಮಾರ್ಗದಲ್ಲಿ ಶುಕ್ರವಾರ ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ವಾಹನ ಸುಟ್ಟಿದೆ. ಲಾರಿಯಲ್ಲಿ ಚಿಪ್ಸ್ ಸಾಗಿಸಲಾಗುತ್ತಿತ್ತು. ಲಾರಿ ಹೂವಿನಹಡಗಲಿಯತ್ತ ತೆರಳುತ್ತಿತ್ತು. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಲಾರಿಗೆ ಬೆಂಕಿ ಹತ್ತಿರುವುದನ್ನು ನೋಡಿ ಕೂಗಾಡಿದ್ದಾರೆ. ಇದರಿಂದಾಗಿ ಲಾರಿಯ ಚಾಲಕ ಮತ್ತು ಸಹಾಯಕ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net