ವಿಶೇಷವೆಂದರೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇವಲ ಒಂದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಈ ಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲ ಭೇಟಿಯ ವೇಳೆ ಹಂಪಿ ಪ್ರವಾಸ ಹಾಗೂ ಗುಡೇಕೋಟೆಯಲ್ಲಿ ಹುಣಸೆ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ್ದರು. ಎರಡನೇ ಭೇಟಿಯಲ್ಲಿ ತಾಲೂಕಿನ ವಿಜಯಶ್ರೀ ಹೆರಿಟೇಜ್‌ನಲ್ಲಿ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ಮರು ದಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಅತ್ಯಾಧುನಿಕ ಎಐ ಲ್ಯಾಬ್ ಉದ್ಘಾಟಿಸಿದ್ದರು. ಸಚಿವರ ಈ ಸರಣಿ ಭೇಟಿಗಳು ಜಿಲ್ಲೆಯ ಸಾಂಸ್ಕೃತಿಕ, ಪರಿಸರ ಮತ್ತು ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ ಎಂದು ಸ್ಥಳೀಯರು ಆಶಯವಾಗಿದೆ.