ಉಡಿ ತುಂಬುವುದು ಮಹಿಳೆಯರ ಗೌರವದ ಸಂಕೇತ

ಹೊಸಪೇಟೆಯಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಶುಕ್ರವಾರ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಮಹಿಳೆಯರಿಗೆ ಉಡಿ ತುಂಬಿದರು.
ಹೊಸಪೇಟೆಯಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಶುಕ್ರವಾರ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಮಹಿಳೆಯರಿಗೆ ಉಡಿ ತುಂಬಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ನಿಮಿತ್ತ ನಡೆದಕಾರ್ಯಕ್ರಮದಲ್ಲಿಕೊಟ್ಟೂರು ಶ್ರೀ ಅಭಿಪ್ರಾಯ

ಹೊಸಪೇಟೆ:ತಾಯಂದಿರಲ್ಲಿಕುಟುAಬದ ಪ್ರಜ್ಞೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಜವಾಬ್ದಾರಿಯನ್ನುಕೊಟ್ಟೂರು ಸ್ವಾಮಿ ಮಠವು ನಿರ್ವಹಿಸುತ್ತಿದೆಎಂದು ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮಿಗಳು ತಿಳಿಸಿದರು.

ಇಲ್ಲಿನ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಜಾತ್ರ ಮಹೋತ್ಸವ ನಿಮಿತ್ತ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ, ಲಿ.ಡಾ.ಸಂಗನಬಸವ ಸ್ವಾಮಿಗಳ ನಾಲ್ಕನೇ ಪುಣ್ಯಸ್ಮರಣೋತ್ಸವ ಹಾಗೂ 1111 ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭದಲ್ಲಿ ಶುಕ್ರವಾರಅವರು ಆಶೀರ್ವಚನ ನೀಡಿದರು.

ತಾಯಂದಿರರುಗಟ್ಟಿಯಾಗಿಇರಬೇಕು. ಅವರುಕುಟುಂಬದ ಶಕ್ತಿ, ದೈವ ಸ್ವರೂಪಿಗಳು.ತಾಯಿಕುಟುಂಬಕ್ಕೆ ದೀಪದಂತೆ ಬೆಳಕು ನೀಡುತ್ತಾರೆ. ಸೌಭಾಗ್ಯ, ಸಮೃದ್ಧಿ, ಲೋಕ ಕಲ್ಯಾಣಕ್ಕಾಗಿ ಮಹಿಳೆಯರನ್ನು ಗೌರವಿಸುವ ಸಂಕೇತವಾಗಿದೆ. ನಿಟ್ಟಿನಲ್ಲಿ ಉಡಿ ತುಂಬುವಕಾರ್ಯಕ್ರಮ ಸಾಕಷ್ಟು ಮಹತ್ವವನ್ನು ಮತ್ತು ಸಾರ್ಥಕತೆಯನ್ನು ಪಡೆದಿದೆಎಂದರು.

ಮರಿಯಮ್ಮನಹಳ್ಳಿಯ ಶ್ರೀ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಂದುದೈವ ಸಂಕಲ್ಪದAತೆ ನಡೆಯುತ್ತದೆ.ಡಾ.ಸಂಗನಬಸವ ಸ್ವಾಮಿಗಳು ಸಮಾಜದಎಲ್ಲರನ್ನೂ ಒಗ್ಗೂಡಿಸಿಕೊಂಡು ಆದರ್ಶದ ಬದುಕು ನಡೆಸಿ, ಎಲ್ಲಿಯೂಇಲ್ಲದ ಸರ್ವಧರ್ಮದ ಸಮನ್ವಯರಥೋತ್ಸವವನ್ನು ಪ್ರಾರಂಭಿಸಿದರು.ಗುರು - ವಿರಕ್ತರನ್ನುಒಗ್ಗೂಡಿಸುವ ಮೂಲಕ ಸಮಾಜವನ್ನು ಒಂದಾಗಿಸಿದರು ಎಂದರು.

ಜಿಲ್ಲಾಧಿಕಾರಿಕವಿತಾಎಸ್. ಮನ್ನಿಕೇರಿ ಮಾತನಾಡಿ, ಕೊಟ್ಟೂರು ಸ್ವಾಮಿ ಮಠಕ್ಕೆ ಸಾಮಾಜಿಕ ಕಳಕಳಿ ಇದೆ.ಉಡಿ ತುಂಬುವುದು ಸಮಾಜವನ್ನುಒಗ್ಗೂಡಿಸುವ ಕೆಲಸ ನಡೆದಿದೆಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net