ರಸಗೊಬ್ಬರ ದರ ದೋಚಾಟ

ವರುಣ್ ಕುಮಾರ್ ತೋರಣಗಟ್ಟೆ
ವರುಣ್ ಕುಮಾರ್ ತೋರಣಗಟ್ಟೆ
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ವಿರುದ್ಧ ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿ ವರುಣ್ ಕುಮಾರ್ ಆರೋಪ
ಹೊಸಪೇಟೆ: ರಾಜ್ಯದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸಿ, ನಿರಂತರವಾಗಿ ರೈತರ ಹಣ ಲೂಟಿ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯದರ್ಶಿ ವರುಣ್ ಕುಮಾರ್ ತೋರಣಗಟ್ಟೆ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವೊಂದರಲ್ಲೇ ಪ್ರತಿವರ್ಷ ರೈತರಿಂದ ಸುಮಾರು 2 ಸಾವಿರ ಕೋಟಿ ರೂ. ಅಧಿಕ ಹಣವನ್ನು ದೋಚಲಾಗುತ್ತಿದೆ. ಸಬ್ಸಿಡಿ ವ್ಯಾಪ್ತಿಯ ಯೂರಿಯಾ ಮತ್ತು ಡಿಎಪಿ ಗೊಬ್ಬರಗಳನ್ನು ನಿಗದಿಗಿಂತ (ಎಂಆರ್ ಪಿ) ದುಪ್ಪಟ್ಟು ದರಕ್ಕೆ ಮಾರಲಾಗುತ್ತಿದೆ. ಇದರೊಂದಿಗೆ ಅವಶ್ಯಕತೆಯಿಲ್ಲದ ಲಿಂಕ್ ಪ್ರಾಡಕ್ಟ್'ಗಳನ್ನು ಬಲವಂತವಾಗಿ ಮಾರಿ ಇನ್ನು 500 ಕೋಟಿ ರೂ. ಸುಲಿಗೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವರ ಪ್ರಕಾರ ದೇಶದಲ್ಲಿ ಸಾಕಷ್ಟು ದಾಸ್ತಾನಿದ್ದರೂ, ರಾಜ್ಯದಲ್ಲಿ ಅಭಾವ ಸೃಷ್ಟಿಸಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಸಗೊಬ್ಬರ ಮಾಫಿಯಾ ಜತೆ ಶಾಮೀಲಾಗಿದ್ದಾರೆ. ಈ ಅಕ್ರಮ ತಡೆಯಲು ಕೃಷಿ ಇಲಾಖೆಗೆ ನೀಡಿದ್ದ ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಫರ್ಟಿಲೈಸರ್ ಕಂಟ್ರೋಲ್ ಆರ್ಡರ್ 1985 ರನ್ವಯ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಹೆಚ್ಚಿನ ದರ ವಸೂಲಿ ಮಾಡುವ ಡೀಲರ್‌ಗಳ ಲೈಸೆನ್ಸ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಸುಬಾನ್ ಹುಗಲೂರು, ಪ್ರಮುಖರಾದ ಚನ್ನವೀರ ಚಿತ್ತಾರ, ಚಲುವಾದಿ ಆನಂದ್, ಎ.ಲೋಕೇಶ್, ವೀರೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net