ರೈತರ ಹಬ್ಬ ಡಿ.29ಕ್ಕೆ

ಸಿ.ಗಾಳೆಪ್ಪ
ಸಿ.ಗಾಳೆಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅದ್ಯಕ್ಷ ಸಿ.ಗಾಳೆಪ್ಪ ಹೇಳಿಕೆ
ಹೊಸಪೇಟೆ: ರೈತ ಹಬ್ಬ ಹಾಗೂ ಸಮಾವೇಶ ಡಿ.29ರಂದು ನಡೆಯಲಿದ್ದು, ಹಲವು ಹಕ್ಕೊತ್ತಾಯ ನಿರ್ಣಾಯ ತಗೆದುಕೊಳ್ಳುತ್ತೇವೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅದ್ಯಕ್ಷ ಸಿ.ಗಾಳೆಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು ಎನ್ನುವ ಸಮಾಜದಲ್ಲಿ ರೈತರಿಗೆ ಕಡೆಗಣಿಸುತ್ತಿದ್ದಾರೆ. ಈ ವರ್ಷ ಅತಿಯಾದ ಮಳೆಯಿಂದ ಹಾಳಾಗಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಎದುರಾಗಿದೆ. ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಸರ್ಕಾರ ಕೊಡುತ್ತಿರುವ ಬೆಳೆ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿದ್ದು ಎಲ್ಲಾ ರೈತರಿಗೂ ಸಂಪೂರ್ಣ ಬೆಳೆ ಹಾನಿ ಪರಿಹಾರ ಒದಗಿಸಬೇಕು.
ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುವಿಗೂ ಬೆಲೆ ನಿಗದಿ ಇರುವಂತೆ ರೈತರೇ ಬೆಲೆ ನಿಗದಿ ಪಡಿಸುವಂತೆ ಮಾಡಬೇಕು. ಜಮೀನುಗಳಿಗೆ ದಿನದ 24 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಸ್ಥಳೀಯವಾಗಿ ಸಕ್ಕರೆ ಕಾರ್ಖಾನೆ ಸರ್ಕಾರ ಸ್ಥಾಪಿಸಲಿ. ರೈತ ದಿನಾಚರಣೆ ನಿಮಿತ್ತ ಡಿ.23ರಂದು ಸರ್ಕಾರಿ ರಜೆ ಘೋಷಣೆ ಮಾಡಲಿ. ಇನ್ನು ಹಲವು ಬೇಡಿಕೆಗಳಿಗೆ ಸಮಾವೇಶದಲ್ಲಿ ಬರುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಮೂಲಕ ಸರ್ಕಾರ ಒತ್ತಾಯಿಸುತ್ತೇವೆ. ಸಮಾವೇಶದಲ್ಲಿ 4 ಸಾವಿರ ರೈತರು ಭಾಗ ವಹಿಸಲಿದ್ದಾರೆ. 101 ಕಳಸ ಹೊತ್ತ ಮಹಿಳೆಯರು, 21 ಎತ್ತಿನ ಬಂಡಿ ಹಾಗೂ ಕಲಾ ತಂಡಗಳು ಮೆರವಣಿಯಲ್ಲಿ ಸಾಗುತ್ತವೆ ಎಂದರು.
ಪ್ರಮುಖರಾದ ಹಾಲೇಶ್, ಪರಶುರಾಂ, ಪವಿತ್ರ, ಹನುಮಕ್ಕ, ಕೆಂಚಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net