ಕುರಿಗಳಿಗೆ ಟೊಮೆಟೊ ಹಾಕಿದ ರೈತ

ಹೊಸಪೇಟೆ ಹೊಲವಲಯದ ರಾಯರಕೆರೆ ಪ್ರದೇಶದಲ್ಲಿ ಶನಿವಾರ ಟೊಮೆಟೊ ಕುರಿಗಳು ಮೆಯುತ್ತಿರುವುದು.
ಹೊಸಪೇಟೆ ಹೊಲವಲಯದ ರಾಯರಕೆರೆ ಪ್ರದೇಶದಲ್ಲಿ ಶನಿವಾರ ಟೊಮೆಟೊ ಕುರಿಗಳು ಮೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ದಿಢೀರ್ ಬೆಲೆ ಕುಸಿತ
ಹೊಸಪೇಟೆ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದಿಢೀರ್ ಬೆಲೆ ಕುಸಿತದಿಂದ ಕಂಗಾಲಾದ ರೈತರು, ಮಾರುಕಟ್ಟೆಗೆ ತಂದಿದ್ದ ಟೊಮೆಟೊ ಕುರಿಗಾಹಿಗಳಿಗೆ ಹಾಕಿದ ಘಟನೆ ನಗರದ ಹೊಲವಲಯದ ರಾಯರಕೆರೆ ಪ್ರದೇಶದಲ್ಲಿ ಶನಿವಾರ ಕಂಡುಬಂತು.
ಟೊಮೆಟೊ ರಪ್ಟಿನ ಮೇಲೆ ಗಂಭೀರ ಪರಿಣಾಮಬೀರಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಟೊಮೆಟೊ ಕೇಳುವವರಿಲ್ಲದಂತಾಗಿದೆ. ಬೆಲೆ ಪಾತಾಳ ಕಂಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಬಾರದಾಗಿದೆ. ಕೆಲವು ರೈತರು ರಸ್ತೆಗೆ ಫಸಲು ಸುರಿಯುತ್ತಿದ್ದರೆ, ಇನ್ನೂ ಕೆಲವರು ಕುರಿ-ಮೇಕೆಗಳ ಹಟ್ಟಿಗಳಿಗೆ ಲೋಡ್ ಗಟ್ಟಲೇ ಉಚಿತವಾಗಿ ಸಾಗಿಸುತ್ತಿದ್ದಾರೆ. ಇನ್ನೂ ಕೆಲವು ರೈತರು ಫಸಲು ಕೀಳಲು ಹಿಂಜರಿಯುತ್ತಿದ್ದಾರೆ. ಕೂಲಿಯ ರೊಕ್ಕವನ್ನೂ ಸರಿದೂಗಿಸಲಾಗದು ಎಂಬ ಆತಂಕ ಕಾಡುತ್ತಿದೆ.
ಹೊಸಪೇಟೆ ಎಪಿಎಂಸಿಯಿAದ ಮರ‍್ನಾಲ್ಕು ಟ್ರ‍್ಯಾಕ್ಟರ್ ಲೋಡ್ ಟೊಮೆಟೊ ನೇರವಾಗಿ ಜಂಬುನಾಥನ ಹಳ್ಳಿ ಮತ್ತು ರಾಯರ ಕೆರೆ ಪ್ರದೇಶದ ಕುರಿಹಟ್ಟಿಗಳಿಗೆ ರವಾನೆಯಾಗುತ್ತಿದೆ. ಟೊಮೆಟೊ ಜತೆಗೆ ಉಳ್ಳಾಗಡ್ಡಿ ಮತ್ತು ಬದನೆಕಾಯಿಯನ್ನು ಸಹ ರೈತರು ಟ್ರ‍್ಯಾಕ್ಟರ್‌ಗಳ ಮೂಲಕ ಹಟ್ಟಿಗಳಿಗೆ ಕೊಂಡೊಯ್ದು ಕುರಿಗಳಿಗೆ ಹಾಕುತ್ತಿದ್ದಾರೆ.
ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಹಾಗೂ ನೆರೆಯ ಸಂಡೂರು, ಕೊಪ್ಪಳ ಭಾಗಗಳಿಂದಲೂ ಹೊಸಪೇಟೆಯ ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಅಪಾರ ಪ್ರಮಾಣದ ಟೊಮೆಟೊ ಫಸಲು ಬರುತ್ತಿದೆ. ಈ ಮಾಲನ್ನು ಕನಿಷ್ಠ ಬೆಲೆಗೂ ಯಾರೂ ಖರೀದಿ ಮಾಡುತ್ತಿಲ್ಲ. ಹೋಟೆಲ್ ಮಾಲೀಕರು ಸಹ ಟೊಮೆಟೊ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಮತ್ತೊಂದೆಡೆ ಟೊಮೆಟೊ ಚಿಪ್ಸ್ ಮತ್ತು ಸಾಸ್ ತಯಾರಿಕಾ ಘಟಕಗಳು ಸಹ ಖರೀದಿಯಿಂದ ಹಿಂದೆ ಸರಿದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net