

ಹೊಸಪೇಟೆ: ಕುಟುಂಬ ಕಲಹದಿಂದ ಪತ್ನಿಯನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ವೆಂಕಟಾಪುರ ಕ್ಯಾಂಪ್ ನಲ್ಲಿ ಬುಧವಾರ ನಡೆದಿದೆ. ಕಮಲಾಪುರ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ವೆಂಕಟಪುರ ಕ್ಯಾಂಪ್ ನಿವಾಸಿ ಜಾನ್ಸಿ( 36) ಕೊಲೆಯಾದ ಮಹಿಳೆ, ನಗರದ ಟಿಬಿಡ್ಯಾಂ ನಿವಾಸಿ ಸೆಲ್ವಕುಮಾರ್ (40) ಕೊಲೆ ಅರೋಪಿ. ಕುಟುಂಬ ಕಲಹದಿಂದ ನಡೆದ ಜಗಳ ಪತ್ನಿಯ ಜೀವ ಪಡೆದಿದೆ. ಮಾರಕಾಸ್ತ್ರದಿಂದ ಕುತ್ತಿಗೆ, ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಕೆಲವೇ ಗಂಟೆಯಲ್ಲಿ ಆರೋಪಿಗೆ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ.ಮಂಜುನಾಥ್ ತಳವಾರ್ ಬೇಟಿ ನೀಡಿ ಪರಿಶೀಲನೆನಡೆಸಿದರು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.