ದೇಶಾದ್ಯಂತ ಎಲ್.ಪಿ.ಜಿ ಉತ್ಪಾದನೆ ಮತ್ತು ಬಾಟಲಿಂಗ್ ಪ್ರಕ್ರಿಯೆ ಉತ್ತಮವಾಗಿದ್ದು, ಸಾಕಷ್ಟು ಪ್ರಮಾಣದ ದಾಸ್ತಾನು ಲಭ್ಯವಿದೆ. ಆದರೆ ಹೆಚ್ಚಿನ ಗ್ರಾಹಕರು ಏಕಕಾಲದಲ್ಲಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಉಂಟಾಗಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಹಕರು ಪ್ರತಿ ಸಿಲಿಂಡರ್ ಪಡೆದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳ ಕಾಲಾವಕಾಶವಿರುತ್ತದೆ. ಐವಿಆರ್‌ಎಸ್, ಮಿಸ್ಡ್ ಕಾಲ್ ಮಾತ್ರವಲ್ಲದೆ ವಾಟ್ಸ್ ಆ್ಯಪ್, ಮೊಬೈಲ್ ಆಪ್, ಮತ್ತು ಪಾವತಿ ಅಪ್ಲಿಕೇಶನ್‌ಗಳ ಮೂಲಕವೂ ಬುಕ್ ಮಾಡಬಹುದು. ಯಾವುದೇ ದೂರು ಅಥವಾ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಆಯ ತಾಲೂಕಿನ ಈ ಕೆಳಗಿನ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.