ತೋರಣಗಲ್‌ನಲ್ಲಿ ಡಿವೈಎಫ್‌ಐನ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ತಾಲೂಕು ಕಾರ್ಯದರ್ಶಿ ನಾಗಭೂಷಣ, ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲೂಬ, ತಾಲೂಕು ಅಧ್ಯಕ್ಷ ಶರೀಫ್ ಇತರರಿದ್ದರು.
ಸಂಡೂರು: ತೋರಣಗಲ್ ಗ್ರಾಮದ ಸೂರಿ ಭವನದಲ್ಲಿ ಆ.23ರಂದು ನಡೆಯುವ ಡಿವೈಎಫ್‌ಐನ ತಾಲೂಕು ಸಮ್ಮೇಳನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಎಂದು ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ ಹೇಳಿದರು.
ಭಾನುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ, ಆರೋಗ್ಯ, ವಸತಿ ನಿವೇಶನಕ್ಕಾಗಿ ಒತ್ತಾಯಿಸಿ, ಉದ್ಯೋಗ ಹಕ್ಕಿಗಾಗಿ ಅಗ್ರಹಿಸಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಕಳೆದ 3 ವರ್ಷದಿಂದ ನಿರಂತರ ಹೋರಾಟ ಕಾರ್ಯಕ್ರಮ ಮಾಡಲಾಗಿದೆ. ಸಮ್ಮೇಳನದ ಭಾಗವಾಗಿ ಸ್ಥಳೀಯ ಸಮಸ್ಯೆಗಳ ಪಟ್ಟಿ ಮಾಡಿ ಘಟಕಗಳನ್ನು ಕ್ರಿಯಾಶೀಲ ಗೊಳಿಸಬೇಕು ಎಂದರು.
ತಾಲೂಕು ಕಾರ್ಯದರ್ಶಿ ನಾಗಭೂಷಣ ಮಾತನಾಡಿ, ಕುಡಿವ ನೀರು, ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜುಗಳು, ರಸ್ತೆ ನಿರ್ಮಾಣ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ನೀವೇಶನ, ಉದ್ಯೋಗ ಖಾತ್ರಿ ಕೆಲಸ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಹೋರಾಟ ರೂಪಿಸಬೇಕು. ಸಾಂಸ್ಕೃತಿಕ ಚಟುವಟಿಕೆ, ಬೀದಿ ನಾಟಕ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು ಎಂದರು. ವಿವಿಧ ಸಂಘಟನೆಗಳ ಸಮಾನ ಮನಸ್ಕರರು ಸಿದ್ಧತಾ ಸಮಿತಿ ರಚಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲೂಬ, ತಾಲೂಕು ಅಧ್ಯಕ್ಷ ಶರೀಫ್, ಉಪಾಧ್ಯಕ್ಷೆ ಶಂಕ್ರಮ್ಮ, ಖಜಾಂಚಿ ಲೋಕೇಶ್, ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಪಂಪನಗೌಡ, ದೇವದಾಸಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಪ್ರಮುಖರಾದ ಅನಿಲ್, ಅಭಿಷೇಕ್, ತಿಮ್ಮಕ್ಕ, ಸ್ವಾತಿ ಇತರರಿದ್ದರು.