ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಥಳೀಯ ರೈತ ಮಹಿಳೆ ಶಾಂತಲಿಂಗಮ್ಮ ಜತೆ ಬೆಳೆಯ ಬಗ್ಗೆ ವಿಚಾರಿಸಿದರು.
Published on:
Copied
Follow Us
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಆವರಿಸಿರುವ ಭೀಕರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ವಿವಿಧ ಭಾಗಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ಬರ ಪರಿಸ್ಥಿತಿಯ ವೀಕ್ಷಣೆ ನಡೆಸಿದರು.
ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಸ್ಥಳೀಯ ರೈತ ಮಹಿಳೆ ಶಾಂತಲಿಂಗಮ್ಮ ಎಂಬುವರ ಜಮೀನಿಗೆ ತೆರಳಿ ಒಣಗಿ ಹೋಗಿರುವ ಮುಸುಕಿನ ಜೋಳ, ಮೆಕ್ಕೆಜೋಳ ಹಾಗೂ ಸಜ್ಜೆ ಬೆಳೆಗಳನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿದರು. ಈ ವೇಳೆ ಬೆಳೆ ನಷ್ಟದಿಂದ ಕಂಗಾಲಾಗಿರುವ ಶಾಂತಲಿಂಗಮ್ಮ ಅವರಿಂದ ಕೃಷಿ ಹಾನಿಯ ಸಂಪೂರ್ಣ ಮಾಹಿತಿ ಪಡೆದ ಸಚಿವರು, ರೈತರ ಸಂಕಷ್ಟಕ್ಕೆ ಸರ್ಕಾರ ಶೀಘ್ರವೇ ಸ್ಪಂದಿಸಲಿದೆ. ಆ.15ಕೆಲ್ಲ ಬರಘೋಷಣೆ
ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಇನ್ನು ಕೊಟ್ಟೂರು ತಾಲೂಕಿನ ಗಜಾಪುರ ಬಳಿ ಸಿದ್ದಪ್ಪ ಎಂಬುವರ ಹೊಲಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಸಚಿವರು, ಬಹುತೇಕ ಬೆಳೆ ಹಾಳಾಗದಂತೆ. ವಿಮೆ ಮಾಡಿಸಿದ ರೈತರ ಪಟ್ಟಿ ಹಾಗೂ ಮಾಡಿಸದವರ ಪಟ್ಟಿ ಮಾಡಿಕೊಡಿ. ಸಿಎಂ ಜತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು
ಈ ವೇಳೆ ಕೂಡ್ಲಿಗಿ ಶಾಸಕ ಡಾ.ಎನ್ ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಜಿಪಂ ಸಿಇಓ ನೊಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ, ಕೂಡ್ಲಿಗಿ ತಹಸೀಲ್ ನೇತ್ರಾವತಿ ಹಲವಾರು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.