ವಿಮೆ ಮಾಡಿಸದವರಿಗೂ ಪರಿಹಾರಕ್ಕೆ ಕ್ರಮ

ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದ ಶಾರದಮ್ಮ ಅವರ ಜಮೀನಿನಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಸೂರ್ಯಕಾಂತಿ ಬೆಳೆ ವೀಕ್ಷಿಸಿದರು. ಶಾಸಕ ಕೃಷ್ಣನಾಯ್ಕ, ಡಿಸಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್  ಅಕ್ರಂ ಅಲಿ ಇತರರಿದ್ದರು.

Published on

ಹೂವಿನಹಡಗಲಿ: ಬೆಳೆವಿಮೆಯಿಂದ ಹೊರಗುಳಿದ ರೈತರನ್ನೂ ಬರ ಪರಿಹಾರದಲ್ಲಿ ಪರಿಗಣಿಸಲು ಸಿಎಂ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹಮ್ಮದ್ ಖಾನ್ ಹೇಳಿದರು. ತಾಲೂಕಿನ ಇಟ್ಟಿಗಿ ಗ್ರಾಮದ ಶಾರದಮ್ಮ ಅವರ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆ ವೀಕ್ಷಿಸಿ ಶುಕ್ರವಾರ ಮಾತನಾಡಿದರು.

ಬೆಳೆವಿಮೆ ಮಾಡಿಸಿದ ರೈತರಿಗೆ 22 ಸಾವಿರ ರೂ.ಮಾತ್ರ ಬರುತ್ತದೆ. ಇದರಿಂದ ಜೀವನ ನಿರ್ವಹಣೆ ಕಷ್ಟ. ಈಗಾಗಲೇ ಜಿಲ್ಲೆಯಲ್ಲಿ 1.46 ಲಕ್ಷ ಎಕರೆಗೆ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ವಿಮೆಯಿಂದ ಹೊರಗುಳಿದ ರೈತರನ್ನೂ ಪರಿಹಾರದಲ್ಲಿ ಪರಿಗಣಿಸಲು ಸಿಎಂ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಶಾಸಕ ಕೃಷ್ಣನಾಯ್ಕ, ಡಿಸಿ ಕವಿತಾ ಎಸ್ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ, ಎಸ್ಪಿ ಎಸ್.ಜಾಹ್ನವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಕೃಷಿ ಎಡಿ ಕೆ.ಟಿ.ಮಂಜುನಾಥ, ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ತಾಪಂ ಇಒ ಜಿ.ಪರಮೇಶ್ವರ, ಡಿವೈಎಸ್ಪಿ ಸಂತೋಷ್ ಚವ್ಹಾಣ್ ಇತರರಿದ್ದರು.

"

ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆಯಾದಾಗ ಅಸಮದಾನ ಸಹಜ. ಕಾಲ ಕ್ರಮೇಣ ಎಲ್ಲವೂ ಸರಿ ಹೋಗುತ್ತದೆ. ನನಗೆ ಸಚಿವ ಸ್ಥಾನ ಸಿಗದಿದ್ದರೂ ಚಿಂತಿಸುತ್ತಿರಲಿಲ್ಲ.

— ಜಮೀರ್ ಅಹಮ್ಮದ್ ಖಾನ್ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net