ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಿಂದಲೂ ಹಂಪಿಯ ತುಂಗಭದ್ರಾ ನದಿ ತೀರ ಅಪರೂಪದ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ತುಂಗಭದ್ರಾ ನದಿ ಪಾತ್ರದಲ್ಲಿ ಅಳವಿನಂಚಿನಲ್ಲಿರುವ ಅಪರೂಪದ ಪ್ರಬೇಧದ ನೀರುನಾಯಿಗಳು ನೆಲೆ ಕಂಡುಕೊAಡಿವೆ. ಆದರೆ, ಈ ಬಾರಿ ತುಂಗಭದ್ರಾ ನದಿ ತೀರದ ಈ ಮುದ್ದಾದ ಜಲಚರಗಳಿಗೆ ಭೀಕರ ಬರಗಾಲದ ಬಿಸಿ ತಟ್ಟಿದೆ. ಜಲಾಶಯದಲ್ಲಿ ನೀರಿಲ್ಲದೆ ನದಿ ಒಣಗುತ್ತಿರುವುದರಿಂದ, ತಮ್ಮ ಹಸಿವು-ತೃಷೆ ನೀಗಿಸಿಕೊಳ್ಳಲು ಈ ಅಪರೂಪದ ಜೀವಾವಳಿಗಳು ಸಂರಕ್ಷಿತ ಪ್ರದೇಶವನ್ನು ಬಿಟ್ಟು ವಲಸೆ ಹೋಗಲಾರಂಭಿಸಿವೆ.