ವಿಜಯನಗರ ಕಾಲುವೆಗಳಿಗೆ ನೀರು ನಿಲ್ಲಿಸದಿರಿ

ಹೊಸಪೇಟೆಯಲ್ಲಿ ಬುಧವಾರ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ವತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಕಟಗಿ ಜಂಬಯ್ಯ ನಾಯಕ, ಉತ್ತಂಗಿ ಕೊಟ್ರೇಶ್, ಕಟಗಿ ರಾಮಕೃಷ್ಣ, ಗಾದಿಲಿಂಗಪ್ಪ, ನಾಗರಾಜ್, ಪರಸಪ್ಪ, ಎಲ್ಲಪ್ಪ, ಮೈಲಾರಿ, ಜಾಕಿರ್ ಹುಸೇನ್, ಅಂಜಿನಪ್ಪ, ಗುಂಡಿ ರಾಘವೇಂದ್ರ, ಗೋಸಲ ಬರಮಪ್ಪ, ಗಿಣಿಗೇರಿ ಅಶೋಕ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ಅವರಿಗೆ ಮನವಿ
ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಇಲ್ಲಿನ ರೈತ ಸಂಘದ ವತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸುಮಾರು 700 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಯ, ಬಸವ, ತುರ್ತಾ ಹಾಗೂ ಬೆಲ್ಲ ಕಾಲುವೆಗಳು ವಿಜಯನಗರ ಭಾಗದ ಕೃಷಿ ಕ್ಷೇತ್ರದ ಜೀವಾಳವಾಗಿವೆ. ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಕಬ್ಬು ಮತ್ತು ಬಾಳೆ ಬೆಳೆಗಳು ಸಂಪೂರ್ಣವಾಗಿ ಇದೇ ಕಾಲುವೆಗಳ ನೀರನ್ನು ನೆಚ್ಚಿಕೊಂಡಿವೆ. ಆದರೆ, ಏಕಾಏಕಿ ನೀರು ಬಂದ್ ಮಾಡಿರುವುದರಿಂದ ಬೆಳೆದು ನಿಂತಿರುವ ಬೆಳೆಗಳು ಒಣಗಿ ಹೋಗುವ ಭೀತಿ ಎದುರಾಗಿದೆ. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾಲುವೆಗಳನ್ನೇ ನಂಬಿ ಸಾಗುವಳಿ ಮಾಡಲಾಗಿದೆ. ತಕ್ಷಣವೇ ನೀರು ಹರಿಸದಿದ್ದರೆ ಬೆಳೆಗಳು ನಾಶವಾಗಲಿವೆ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಹಾಗೂ ಬೆಳೆದು ನಿಂತ ಬೆಳೆಗಳನ್ನು ರಕ್ಷಿಸುವ ಸಲುವಾಗಿ ವಿಳಂಬ ಮಾಡದೆ ತಕ್ಷಣವೇ ರಾಯ, ಬಸವ, ತುರ್ತಾ ಹಾಗೂ ಬೆಲ್ಲ ಕಾಲುವೆಗಳಿಗೆ ನೀರು ಬಿಡಬೇಕು ಎಂದು ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net