ಹಕ್ಕುಪತ್ರ ಮಾರಲು ಹೋಗಬೇಡಿ

ಪಾಪಿನಾಯಕನಹಳ್ಳಿಯಲ್ಲಿ ಮಂಗಳವಾರ ಎಚ್.ಆರ್.ಗವಿಯಪ್ಪ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ತಾಪಂ ಇಒ ಆಲಂ ಭಾಷ, ಸಿಡಿಪಿಒ ಸಿಂಧು ಅಂಗಡಿ, ವಸತಿ ನೂಡಲ್ ಅಧಿಕಾರಿ ಮಹೇಶ್, ಪಿಡಿಒ ಸಣ್ಣ ಬೀರಪ್ಪ ಇತರರಿದ್ದರು.
ಪಾಪಿನಾಯಕನಹಳ್ಳಿಯಲ್ಲಿ ಮಂಗಳವಾರ ಎಚ್.ಆರ್.ಗವಿಯಪ್ಪ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ತಾಪಂ ಇಒ ಆಲಂ ಭಾಷ, ಸಿಡಿಪಿಒ ಸಿಂಧು ಅಂಗಡಿ, ವಸತಿ ನೂಡಲ್ ಅಧಿಕಾರಿ ಮಹೇಶ್, ಪಿಡಿಒ ಸಣ್ಣ ಬೀರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಫಲಾನುಭವಿಗಳಿಗೆ ಶಾಸಕ ಎಚ್.ಆರ್. ಗವಿಯಪ್ಪ ಸಲಹೆ

ಹೊಸಪೇಟೆ: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ 74 ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ಹಕ್ಕುಪತ್ರ ನೀಡಲಾಗಿದೆ ಎಂದು ಎಚ್.ಆರ್.ಗವಿಯಪ್ಪ ಮಾಹಿತಿ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿA ತಾಲೂಕಿನ ಪಾಪಿನಾಯಕನಹಳ್ಳಿಯ ಚಿಂದುಲನಾಗಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಪಾಪಿನಾಯಕನಹಳ್ಳಿ ಗ್ರಾಮಸಭೆಯಲ್ಲಿ 97 ಫಲಾನುಭವಿಗಳು ಆಯ್ಕೆಯಾಗಿದ್ದು, ಪೈಕಿ 74 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಹಿನ್ನುಳಿದ 3 ನಿವೇಶನಗಳು ರೇಷನ್ ಕಾರ್ಡ್ ಇಲ್ಲದೆ ಇರುವವರು, 6 ನಿವೇಶನಗಳು ಸ್ಪೆಲ್ಲಿಂಗ್ ಮಿಸ್ಟೇಕ್, ಹುಟ್ಟಿದ ದಿನಾಂಕ ತಪ್ಪಾಗಿ ಅನುಮೋದನೆ, ಇನ್ನು 3 ನಿವೇಶನ ತಾಲೂಕು ಪಂಚಾಯಿತಿಯಲ್ಲಿ ಅನುಮೋದನೆ ಇಲ್ಲದಿರುವುದು ಮತ್ತು 11 ನಿವೇಶನಗಳು ಹಿಂದಿನ ವಸತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಅದನ್ನು ತಿರಸ್ಕರಿಸಲಾಗಿದೆ ಎಂದರು.

ನಿವೇಶನದ ಜತೆಯಲ್ಲಿ 7 ಲಕ್ಷ ರೂ. ಮನೆ ಕೂಡ ಕಟ್ಟಿಸಿ, ವಿದ್ಯುತ್ ಸೇರಿದಂತೆ ಮುಂತಾದ ವ್ಯವಸ್ಥೆ ಮಾಡಲಾಗಿದೆ. ಹೋರ ರಾಜ್ಯಗಳಿಂದ ಬರುವವರಿಗೆ ಮಾತ್ರವಲ್ಲದೆ ಸ್ಥಳೀಯ ಫಲಾನುಭವಿಗಳಿಗೆ ಅವಕಾಶ ನೀಡಬೇಕೆಂದು ಸಿಎಂಗೆ ಬೇಡಿಕೆ ಇಟ್ಟಿರುವೆ. ಹಕ್ಕುಪತ್ರ ಸುರಕ್ಷತೆಯಾಗಿರಿಸಿ, ಮಾರಲು ಹೋಗೆಡಿ ಹಾಗೂ ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿ ಎಂದು ಸಲಹೆ ನಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net