ಸ್ವಚ್ಛತಾ ಕಾರ್ಮಿಕರನ್ನು ಕೈಬಿಡಬೇಡಿ

ಕಮಲಾಪುರದಲ್ಲಿ ಸೋಮವಾರ ಸಿಐಟಿಯು ಸಂಘಟನೆನಿAದ ಹವಾಮ ಆಯುಕ್ತ ರಮೇಶ್ ವಟಿಗಲ್ ಕಚೇರಿ ಮುಂದೆ ಪ್ರತೊಭಟನೆ ನಡೆಸಿದರು.. ಸಿಐಟಿಯುನ ಜಿಲ್ಲಾ ಸಂಚಾಲಕಿ ಕೆ.ಎಂ.ಸ್ವಪ್ನ, ಜಿಲ್ಲಾ ಸಹ ಸಂಚಾಲಕ ಕೆ.ಎಂ.ಸAತೋಷ್ ಕುಮಾರ್, ಕಾರ್ಮಿಕರಾದ ಲಲಿತಾಬಾಯಿ, ಭಾರತಿ, ರಾಮಾಂಜನಿ, ಶ್ರೀನಿವಾಸ ನಾಯ್ಕ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ಸಂಘಟನೆನಿAದ ಹವಾಮ ಆಯುಕ್ತರಿಗೆ ಮನವಿ
ಹೊಸಪೇಟೆ: ಸ್ವಚ್ಛತಾ ಕಾರ್ಮಿಕರನ್ನು ಕೆಲಸದಿಂದ ಕೈಬಿಡದಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನಿಂದ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮ)ದ ಆಯುಕ್ತ ರಮೇಶ್ ವಟಗಲ್ ಅವರಿಗೆ ತಾಲೂಕಿನ ಕಮಲಾಪುರದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.
ಹವಾಮದ ಅಧೀನದಲ್ಲಿ ಕಾರ್ಮಿಕರು ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 25ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕೈ ಬಿಡಲಾಗಿದೆ. ಅನುದಾನದ ಕೊರತೆಯಿದೆ ಎಂದು ಕೆಲಸದಿಂದ ಕೈಬಿಟ್ಟಿರುವುದು ಹಾಗೂ ಬಾಕಿ ಮೂರು ತಿಂಗಳ ವೇತನ ಉಳಿಸಿಕೊಂಡಿರುವುದು ಸರಿಯಾದಂತ ಕ್ರಮವಲ್ಲ. ತಕ್ಷಣವೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಈ ಸ್ವಚ್ಛತಾ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಮತ್ತು ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net