ಮಕ್ಕಳನ್ನು ಕೆಲಸಕ್ಕೆ ನಿಯೋಜಿಸದಿರಿ

ಕೊಟ್ಟೂರಿನಲ್ಲಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಬಗ್ಗೆ ಗ್ಯಾರೇಜ್ ಮಾಲೀಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕೊಟ್ಟೂರಿನಲ್ಲಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಬಗ್ಗೆ ಗ್ಯಾರೇಜ್ ಮಾಲೀಕರಲ್ಲಿ ಜಾಗೃತಿ ಮೂಡಿಸಲಾಯಿತು.
Published on
ಕೊಟ್ಟೂರು: ತಹಸೀಲ್ದಾರ್ ಜಿ.ಕೆ.ಅಮರೇಶ ನೇತೃತ್ವದ ಟಾಸ್ಕ್‌ಫೋರ್ಸ್ ಪಟ್ಟಣದಲ್ಲಿ ಅಂಗಡಿ, ಬೇಕರಿ ಹಾಗೂ ಗ್ಯಾರೇಜ್ ತಪಾಸಣೆ ನಡೆಸಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಬಗ್ಗೆ ಅರಿವು ಮೂಡಿಸಿತು.
ವಿಜಯನಗರ ಜಿಲ್ಲಾಧಿಕಾರಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದ ಮೇರೆಗೆ ಶುಕ್ರವಾರ ತಪಾಸಣೆ ನಡೆಯಿತು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವುದು ಹಾಗೂ 18 ವರ್ಷದೊಳಗಿನವರನ್ನು ಅಪಾಯಕಾರಿ ಕಾರ್ಯಗಳಲ್ಲಿ ತೊಡಗಿಸುವುದು ಅಪರಾಧವೆಂದು ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.
ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್, ಪ್ರಭಾರ ಕಂದಾಯ ನಿರೀಕ್ಷಕ ಎಚ್.ಹರೀಶ್, ಕಾರ್ಮಿಕ ಇಲಾಖೆ ಸಿಬ್ಬಂದಿ ವೆಂಕಟೇಶ ಪಿ. ಎಂ ಈಶ್ವರ, ನರೇಗಾ ಯೋಜನೆ ಅಧಿಕಾರಿ ಎಚ್.ವಿಜಯ ಕುಮಾರ, ಇಸಿಒ ನಿಂಗಪ್ಪ, ಸಿಆರ್‌ಪಿಗಳಾದ ಅಜ್ಜಯ್ಯ, ಅಣಜಿ ಸಿದ್ದಲಿಂಗಪ್ಪ, ಪಪಂ ಆರೋಗ್ಯ ನಿರೀಕ್ಷಕಿ ಗೀತಾ, ಡಾ.ಮಂಜನಾಥ, ಆರ್‌ಕೆಎಸ್‌ಕೆ ಆಪ್ತ ಸಂಯೋಜಕಿ ಎ.ಶಶಿಕಲಾ, ಪೊಲೀಸ್ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net