ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ರಾಮನಾಮ ಜಪಿಸುತ್ತಿರುವುದು ಕಂಡುಬAದಿತು. ಹಂಪಿಯ ಕೋದಂಡರಾಮ ದೇಗುಲ ಸೇರಿದಂತೆ ವಿವಿಧ ದೇಗುಲಗಳಲ್ಲೂ ವಿಶೇಷ ಪೂಜೆಗಳು ನೆರೆವೇರಿದವು. ಜಿಲ್ಲೆಯ ರಾಮಮಂದಿರಗಳು, ವೆಂಕಟೇಶ್ವರ ದೇಗುಲ, ಆಂಜನೇಯನ ದೇಗುಲಗಳಲ್ಲಿ ಹಾಗೂ ರಾಮನ ಆರಾಧನೆ ಮಾಡುವ ಮನೆಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ವಿತರಿಸಲಾಯಿತು. ಇನ್ನು ಆಂಜನೇಯ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು ಕಂಡು ಬಂತು. ಬೆಳಿಗ್ಗೆಯಿಂದಲೇ ಕುಟುಂಬ ಸಮೇತರಾಗಿ ಬಂದು ರಾಮನ ಬಂಟ ಹನುಮಂತನ ದರ್ಶನ ಪಡೆದು ಪೂಜೆ ಸಲ್ಲಿಸಿದರು.