ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹಗರಿಬೊಮ್ಮನಹಳ್ಳಿ ತಾಲೂಕಿನ ನಕ್ರಾಳ್ ತಾಂಡದಲ್ಲಿ ಗ್ರಾಮಸ್ಥರು ಭಾನುವಾರ ಹಮ್ಮಿಕೊಂಡಿದ್ದ, ಶ್ರೀಸಂತ ಸೇವಾಲಾಲ್ ಜಯಂತೋತ್ಸವ ನಡೆಯಿತು.
ಹಗರಿಬೊಮ್ಮನಹಳ್ಳಿ ತಾಲೂಕಿನ ನಕ್ರಾಳ್ ತಾಂಡದಲ್ಲಿ ಗ್ರಾಮಸ್ಥರು ಭಾನುವಾರ ಹಮ್ಮಿಕೊಂಡಿದ್ದ, ಶ್ರೀಸಂತ ಸೇವಾಲಾಲ್ ಜಯಂತೋತ್ಸವ ನಡೆಯಿತು.
Published on
ಹಗರಿಬೊಮ್ಮನಹಳ್ಳಿ: ನಕ್ರಾಳ್ ತಾಂಡದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಮಾಲಾಧಾರಿಗಳ ಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಪೂಜಾ ಕೈಂಕರ್ಯ ನಡೆದವು.
ಬಂಜಾರ ಶಕ್ತಿಪೀಠ ದೂಪದಳ್ಳಿ ತಾಂಡಾದ ಶಿವಪ್ರಕಾಶ ಮಹಾರಾಜ್ ಸಾನ್ನಿಧ್ಯ ವಹಿಸಿ ಮಾತನಾಡಿ, ತಾಂಡಗಳಲ್ಲಿನ ಯುವಕರು ದುಶ್ಚಟಗಳಿಂದ ದೂರವಿರಬೇಕು. ಕುಟುಂಬಗಳ ಜವಾಬ್ದಾರಿ ನಿಭಾಯಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಮಹಿಳೆಯರು ಕುಂಭ ಹಾಗೂ ಚಿತ್ತಾರದ ಮಡಿಕೆ ಹೊತ್ತು ವಿವಿಧ ವಾದ್ಯಗಳು ಹಾಗೂ ಭಜನಾ ಮಂಡಳಿಯೊಂದಿಗೆ ನೃತ್ಯ ಮಾಡುತ್ತಾ ಸ್ವಾಮೀಜಿಗೆ ಜಯಘೋಷ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸೇವಾಲಾಲ್ ಮೂರ್ತಿಯನ್ನು ತೊಟ್ಟಿಲಲ್ಲಿ ಸ್ಥಾಪಿಸಿ, ಪೂಜೆಯೊಂದಿಗೆ ಅಗ್ನಿ ಹೋಮ ಮಾಡಲಾಯಿತು. ನಂತರ ಧಾರ್ಮಿಕ ಸಭೆ ನಡೆಯಿತು. ಬಳಿಕ ಮಾಲಾಧಾರಿಗಳು ಮಾಲೆ ವಿರ್ಸಜನೆ ಮಾಡಿದರು.
ಪ್ರಮುಖರಾದ ಧರ್ಮನಾಯ್ಕ, ತುಳಸಿಬಾಯಿ, ಬಣಕಾರ ಯಮನಾ ನಾಯ್ಕ, ನಾಯಕ ಲಾಲ್‌ಸಿಂಗ್, ಡಾವಾ ಸುರೇಶನಾಯ್ಕ, ಲೀಲಾನಾಯ್ಕ, ನಾಗರಾಜ ನಾಯ್ಕ, ರವಿನಾಯ್ಕ, ಆನಂದ ನಾಯ್ಕ, ಪಿರ‌್ಯಾನಾಯ್ಕಾ, ಗೋವಿಂದನಾಯ್ಕ, ಪಕ್ಕೀರನಾಯ್ಕ, ಸಂತ ಸೇವಾಲಾಲ್ ಮಹಾರಾಜ್ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮದ ದೈವಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net