ಕಂಪ್ಲಿ: ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅವರು ಜೀವನಪೂರ್ತಿ ಶ್ರಮಿಸಿದ್ದಾರೆ ಎಂದು ಚೇತನ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.
ನಗರದ ಯೋಗಿ ನಾರೇಯಣ ಯತೀಂದ್ರರ ಬಲಿಜ ಭವನದಲ್ಲಿ ಕಂಪ್ಲಿ ಬಲಿಜ ಮಹಿಳಾ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಅವರ 195ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಿಂದ ಸಮಾಜವನ್ನು ಅಮೂಲಾಗ್ರವಾಗಿ ಬದಲಿಸಲು ಸಾವಿತ್ರಿಬಾಯಿ ಅವರು ಸ್ತ್ರೀಶಿಕ್ಷಣ, ಸಮಾನತೆಗಾಗಿ ಹೋರಾಡಿದರು ಎಂದರು.
ಬಲಿಜ ಮಹಿಳಾ ಸಂಘದ ನಗರ ಅಧ್ಯಕ್ಷೆ ಶಾರದಾ ಲೋಕೇಶ್ ಮಾತನಾಡಿ, ಮಹಿಳೆಯರಿಗೆ ಎಲ್ಲ ರಂಗಗಳಲ್ಲೂ ಮುನ್ನುಗ್ಗಿ ಸಾಧಿಸುವ ಸಾಮರ್ಥ್ಯವಿದ್ದು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ, ಪೋಷಣೆ, ಅವಕಾಶಗಳನ್ನು ಕಲ್ಪಿಸುವಲ್ಲಿ ಪಾಲಕರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು. ನಂ.10ಮುದ್ದಾಪುರದ ಸಹಿಪ್ರಾ ಶಾಲೆ ಶಿಕ್ಷಕಿಯರನ್ನು ಗೌರವಿಸಲಾಯಿತು.
ಬಲಿಜ ಸಮಾಜದ ಅಧ್ಯಕ್ಷ ಡಿ.ಶ್ರೀನಿವಾಸ್, ಮಹಿಳಾ ಸಂಘದ ಪದಾಧಿಕಾರಿಗಳಾದ ಕವಿತಾಳ್ ವಿದ್ಯಾ, ಸಹನಾ, ಪದ್ಮಾ, ತುಳಸಿ, ಲಕ್ಷ್ಮೀ, ಜ್ಯೋತಿ, ರೂಪಕಲಾ, ರೇಣುಕಾ, ರೂಪಾ, ರಜಿನಿ, ನಾರಾಯಣ ಇಂಗಳಗಿ, ಕಾಳಿಂಗವರ್ಧನ, ಕೆ.ಶಿವಕುಮಾರ್, ಲೋಕೇಶ್, ಮಲ್ಲಿಕಾರ್ಜುನ, ಶ್ರೀರಾಮುಲು ಇತರರಿದ್ದರು.