ಶ್ರೀ ಗುರುಕೊಟ್ಟೂರೇಶ್ವರ ದರ್ಶನ ಪಡೆದ ಭಕ್ತಗಣ

ಅಮಾವಾಸ್ಯೆ ನಿಮಿತ್ತ ಶುಕ್ರವಾರ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ದೇವಸ್ಥಾನದ ಮುಂದೆ ಭಕ್ತರು ಸಾಲಿನಲ್ಲಿ ನಿಂತಿದ್ದರು.
ಅಮಾವಾಸ್ಯೆ ನಿಮಿತ್ತ ಶುಕ್ರವಾರ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ದೇವಸ್ಥಾನದ ಮುಂದೆ ಭಕ್ತರು ಸಾಲಿನಲ್ಲಿ ನಿಂತಿದ್ದರು.
Published on
ಕೊಟ್ಟೂರು: ಚೈತ್ರ ಅಮಾವಾಸ್ಯೆ ನಿಮಿತ್ತ ಪಟ್ಟಣದ ಆರಾಧ್ಯದೇವರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಅಸಂಖ್ಯಾತ ಭಕ್ತರು ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಬ್ರಾಹ್ಮೀ ಮುಹೂರ್ತದಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಆರಂಭವಾದವು. ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರು ತಂಡೋಪಾದಿಯಲ್ಲಿ ಆಗಮಿಸಿದರು. ದೇವಸ್ಥಾನದ ಎರಡೂ ಕಡೆ ಭಕ್ತರು ಸಾಲು ನಿಂತಿದ್ದರು. ದೇವಸ್ಥಾನದ ಮುಂಭಾಗ ಹಾಗೂ ಎರಡು ಬದಿ ನೆರಳಿನ ವ್ಯವಸ್ಥೆ ಇದ್ದರೂ, 10 ಗಂಟೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಭಕ್ತರು ಪರದಾಡಿದರು. ಪ್ರತಿದಿನ ದೇವಸ್ಥಾನದಲ್ಲಿ 11.30 ಕ್ಕೆ ಸಿದ್ಧವಾಗುತ್ತಿದ್ದ ಪ್ರಸಾದ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿದ್ಧವಾಗಿದ್ದರಿಂದ ಬಹುತೇಕ ಭಕ್ತರು ಹೋಟೆಲ್‌ಗಳಿಗೆ ತೆರಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net