ಬದ್ಯಾನಾಯ್ಕ ತಾಂಡಾ ತೆರವಿಗೆ ಆಗ್ರಹ

ಹೊಸಪೇಟೆ ಬದ್ಯಾನಾಯ್ಕ ತಾಂಡಾ ತೆರವಿಗೆ ಶನಿವಾರ ನಡೆದ ಮನೆಗಳ ಸಮೀಕ್ಷೆಯನ್ನು ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಶಿವಕುಮಾರ್ ಯರಗುಡಿ, ಪಿಎಸ್‌ಐ ಶಿವಕುಮಾರ್ ಇತರರಿದ್ದರು.
ಹೊಸಪೇಟೆ ಬದ್ಯಾನಾಯ್ಕ ತಾಂಡಾ ತೆರವಿಗೆ ಶನಿವಾರ ನಡೆದ ಮನೆಗಳ ಸಮೀಕ್ಷೆಯನ್ನು ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಶಿವಕುಮಾರ್ ಯರಗುಡಿ, ಪಿಎಸ್‌ಐ ಶಿವಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆಸ್ಪತ್ರೆ ರಸ್ತೆಗಾಗಿ ಮನೆಗಳ ಸಮೀಕ್ಷೆಗೆ ಮುಂದಾದ ಅಧಿಕಾರಿಗಳು
ಹೊಸಪೇಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಗಾಗಿ ನಿರ್ಮಾಣ ಆಗುತ್ತಿರುವ ರಸ್ತೆಗಾಗಿ ನಗರದ ಹೊರವಲಯದ ಬದ್ಯಾನಾಯ್ಕ ತಾಂಡಾ ತೆರವಿಗೆ ಶನಿವಾರ ನಡೆದ ಮನೆಗಳ ಸಮೀಕ್ಷೆಯನ್ನು ಸ್ಥಳೀಯರ ವಿರೋಧ ವ್ಯಕ್ತಪಡಿಸಿದರು.
ಅಂದಾಜು 80 ವರ್ಷಗಳಿಂದ 70 ಕುಟುಂಬಗಳು ನಗರದ ಬದ್ಯಾನಾಯ್ಕ ತಾಂಡಾದಲ್ಲಿ ವಾಸ ಮಾಡುತ್ತಿದ್ದಾರೆ. ಈ ಸ್ಥಳ ತುಂಗಭದ್ರಾ ಆಡಳಿತ ಮಂಡಳಿ (ಟಿಬಿಬಿ)ಗೆ ಸೇರಿದ ಜಾಗ ಎಂದು ಟಿಬಿಬಿ, ಕಂದಾಯ ಹಾಗೂ ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಮನೆಗಳ ಸಮೀಕ್ಷೆ ಕಾರ್ಯ ನಡೆಯಿತು. ಸಮೀಕ್ಷೆ ಮುನ್ನ ಸ್ಥಳೀಯರು ಮನೆಗಳ ತೆರವಿಗೆ ಬಂದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ವರ್ಷದ 6 ತಿಂಗಳು ಗುಳೆ ಹೋಗುತ್ತವೆ. ಮಕ್ಕಳನ್ನು ಇಲ್ಲೆ ಬಿಟ್ಟು ಕಬ್ಬು ಕಟಾವಿಗೆ ಹೋಗುತ್ತವೆ. ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ರಸ್ತೆ ಅಭಿವೃದ್ಧಿ ತೆರವು ಕಾರ್ಯಚರಣೆ ನಡೆದರೆ ಅಂದಾಜು 80 ಕುಟುಂಬಗಳು ಬಿದಿಗೆ ಬರುತ್ತಿವೆ. ಆದ್ದರಿಂದ ಇಲ್ಲಿ ಮನೆಗಳ ತೆರವು ಮಾಡದೇ ಪರ್ಯಾಯ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬೇಟಿ ನೀಡಿದ ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಸ್ಥಳಿಯರೊಂದಿಗೆ ಮಾತನಾಡಿ, ಸದ್ಯ ನಾವು ಮನೆಗಳ ತೆರವಿಗೆ ಯಾವುದೇ ಯೋಜನೆ ಮಾಡುತ್ತಿಲ್ಲ. ಕೇವಲ ಎಷ್ಟು ಮನೆಗಳಿವೆ, ಜನಸಂಖ್ಯೆ ಎಷ್ಟಿದೆ ಎಂದು ಸಮೀಕ್ಷೆ ಮಾಡುತ್ತೇವೆ. ನಂತರ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ವರದಿ ಒಪ್ಪಿಸಲಾಗುತ್ತದೆ. ಒಂದು ವೇಳೆ ಮನೆಗಳ ತೆರವು ಕಾರ್ಯ ನಡೆದರೆ, ಪರಿಹಾರದ ಜತೆ ಜಾಗದ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ನೀವು ಮಾತು ಕೇಳದಿದ್ದರೆ, ಟಿಬಿಬಿ ಜಾಗವನ್ನು ತೆರವು ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಆದ್ದರಿಂದ ಇಲ್ಲಿ ವಾಸ್ತು ಸ್ಥಿತಿ ತಿಳಿಯಲು ಮನೆಗಳ ಸಮೀಕ್ಷೆಗೆ ಅನುಕೂಲ ಮಾಡಬೇಕು ಎಂದು ಸ್ಥಳೀಯರ ಮನವೊಲಿಸಿದರು.
ಪ್ರಮುಖರಾದ ಬಾಬುನಾಯ್ಕ, ತೆಜ್ಯನಾಯ್ಕ, ಪಾಂಡುನಾಯ್ಕ, ಸೋಮಲಿಬಾಯಿ, ದರಗಿಬಾಯಿ, ಹನುಮಕ್ಕ ಇತರರಿದ್ದರು. ಪಿಎಸ್ ಐ ಶಿವಕುಮಾರ್ ನಾಯ್ಕ ಪೊಲೀಸ್ ಭದ್ರತೆ ಒದಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net