ಖರ್ಗೆ ವೇದಿಕೆ ಶುದ್ಧೀಕರಣ ತಪ್ಪಿತಸ್ಥರ ವಿರುದ್ಧ ಆಗ್ರಹ

ಹೊಸಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖರ್ಗೆ ವೇದಿಕೆ ಶುದ್ಧೀಕರಣ ತಪ್ಪಿತಸ್ಥರ ವಿರುದ್ಧ ಆಗ್ರಹಿಸಿ ತಹಸೀಲ್ ಕಚೇರಿ ಸ್ಥಾನಿಕಾಧಿಕಾರಿ ಅಮರನಾಥ ಅವರಿಗೆ ಮನವಿ ಸಲ್ಲಿಸಿದರು. ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಭಕ್ಷಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಪ್ರಮುಖರಾದ ಸಣ್ಣ ಮಾರೆಪ್ಪ, ನಿಂಬಗಲ್ ರಾಮಕೃಷ್ಣ, ಡಿ.ವೆಂಕಟರಮಣ, ಮಾರೆಣ್ಣ, ಪ್ರದೀಪ್ ಬಾವಿಕಟ್ಟಿ, ಗಣೇಶ್ ಪಾಟೀಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಖಂಡಿಸಿ ರಾಷ್ಟ್ರಪತಿಗೆ ಮನವಿ
ಹೊಸಪೇಟೆ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಾರ್ವಜನಿಕ ಸಭೆಯ ನಂತರ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ ಕಚೇರಿ ಸ್ಥಾನಿಕಾಧಿಕಾರಿ ಅಮರನಾಥ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಖರ್ಗೆಯವರು ನಿರ್ಗಮಿಸಿದ ತಕ್ಷಣ ವೇದಿಕೆಯನ್ನು ತೊಳೆದು ಶುದ್ಧೀಕರಿಸಿದ ಕೃತ್ಯವು ಸಂವಿಧಾನ ವಿರೋಧಿ ಹಾಗೂ ಅಸ್ಪೃಶ್ಯತೆಯ ಆಚರಣೆಯಾಗಿದೆ. 1927ರ ಮಹಾಡ್ ಸತ್ಯಾಗ್ರಹದ ಕಾಲದ ಜಾತಿ ತಾರತಮ್ಯದ ಮನಸ್ಥಿತಿ ಇಂದಿಗೂ ಮುಂದುವರಿದಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಸಂವಿಧಾನದ ವಿಧಿ 17ರ ಉಲ್ಲಂಘನೆಗಾಗಿ ತಪ್ಪಿತಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ತಕ್ಷಣ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು. ಘಟನೆಗೆ ಕಾರಣರಾದವರು ಬಹಿರಂಗವಾಗಿ ದೇಶದ ಜನತೆಯ ಕ್ಷಮೆಯಾಚಿಸಬೇಕು. ಉತ್ತರಾಖಂಡ ಸರ್ಕಾರದಿಂದ ಸಮಗ್ರ ವರದಿ ತರಿಸಿಕೊಂಡು ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಬೇಕು. ಸಾರ್ವಜನಿಕ ವೇದಿಕೆಗಳಲ್ಲಿ ತಾರತಮ್ಯ ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net