ವರದಿ ಸಲ್ಲಿಕೆ ಬಳಿಕ ನ್ಯಾಯಾಲಯ ಆರಂಭ

ಕೊಟ್ಟೂರು ಪಪಂ ಆವರಣದಲ್ಲಿರುವ ಬಾಲಭವನದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು  ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಪರಿಶೀಲಿಸಿದರು.
ಕೊಟ್ಟೂರು ಪಪಂ ಆವರಣದಲ್ಲಿರುವ ಬಾಲಭವನದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಪರಿಶೀಲಿಸಿದರು.
Published on
ಕೊಟ್ಟೂರು: ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ನ್ಯಾಯಾಲಯದ ಆರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಹೈಕೋರ್ಟ್ ಹಾಗೂ ವಿಜಯನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಬಾಲಭವನದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡ ನವೀಕರಣ ಕಾರ್ಯ ವೀಕ್ಷಿಸಿ ಭಾನುವಾರ ಮಾತನಾಡಿದರು. ನವೀಕರಣ ಕಾರ್ಯ ಪೂರ್ಣಗೊಳಿಸಿದ ನಂತರ ಜಿಲ್ಲಾ ನ್ಯಾಯಾಧೀಶರು ಕಟ್ಟಡ ಪರಿಶೀಲಿಸಿ ವರದಿ ಸಲ್ಲಿಸಲಿದ್ದು, ಆ ನಂತರ ನ್ಯಾಯಾಲಯ ಆರಂಭಕ್ಕೆ ಅನುಮತಿ ನೀಡಲಾಗುವುದು. ಸದರಿ ಕಟ್ಟಡದಲ್ಲಿ ಸದ್ಯಕ್ಕೆ ವಕೀಲರ ಸಂಘಕ್ಕೆ ಜಾಗ ಕೊಡಲಾಗುವುದಿಲ್ಲ ಎಂದು ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ತಾಲೂಕು ಆಡಳಿತ ನಿವೇಶನ ನೀಡಿದೆ. ಈ ಸ್ಥಳದಲ್ಲಿ ನ್ಯಾಯಾಲಯ ಕಟ್ಟಡ, ನ್ಯಾಯಾಧೀಶರ ವಸತಿಗೃಹಗಳು, ವಕೀಲರ ಸಂಘದ ಕಚೇರಿ ನಿರ್ಮಿಸಲಾಗುವುದು ಎಂದು ನ್ಯಾಯಾಲಯ ಹೋರಾಟ ಸಮಿತಿ ಅಧ್ಯಕ್ಷ, ವಕೀಲ ಗುರುಸಿದ್ದನಗೌಡ ತಿಳಿಸಿದರು,
ನ್ಯಾಯಾಧೀಶರಾದ ಎಂ.ರಾಜಶೇಖರ್, ಡಿ.ಪಿ.ಕುಮಾರಸ್ವಾಮಿ, ಜೆ.ಯೋಗೀಶ್, ಎಚ್.ಜೆ.ಶಿಲ್ಪಾ, ನ್ಯಾಯಾಲಯ ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಪ್ರಭುದೇವ್, ಕಾರ್ಯದರ್ಶಿ ಶಿವಾನಂದ ಬಾವಿಕಟ್ಟಿ, ಜಂಟಿ ಕಾರ್ಯದರ್ಶಿಗಳಾದ ಕೆ.ಗುರುಬಸವರಾಜ್, ಟಿ.ಹನುಮಂತಪ್ಪ, ಖಜಾಂಚಿ ಟಿ.ಎಂ.ಸೋಮಯ್ಯ, ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಹೊನ್ನೂರಪ್ಪ, ಲೋಕೋಪಯೋಗಿ ಇಲಾಖೆ ಎಇಇ ನಾಗನಗೌಡ, ವಕೀಲರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net