ಕಲ್ಲೇಶ್ವರ ಸ್ವಾಮಿಗೆ ನಿರಂತರ ಜಲಾಭಿಷೇಕ

ಸೋಗಿ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಜಲಾಭಿಷೇಕ ಕೈಗೊಂಡರು.
ಸೋಗಿ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಜಲಾಭಿಷೇಕ ಕೈಗೊಂಡರು.
Published on
ಹೂವಿನಹಡಗಲಿ: ಸೋಗಿ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಐದು ದಿನಗಳಿಂದ ನಿರಂತರ ಜಲಾಭಿಷೇಕ ನಡೆಸುತ್ತಿದ್ದಾರೆ.
ಬೆಟ್ಟದ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಸಲ್ಲಿಸಿ ಐದು ಬಿಂದಿಗೆಗಳಲ್ಲಿ ಬೆಟ್ಟದಲ್ಲಿನ ಪಾತಾಳ ಗಂಗೆಯನ್ನು ತಂದು, ವೀರಭದ್ರೇಶ್ವರ, ಪತ್ರಿಬಸವೇಶ್ವರ, ತೇರುಗಡ್ಡೆ ದುರುಗಮ್ಮ, ಕರಿಗಲ್ಲಿಗೆ ಅಭಿಷೇಕ ನೆರವೇರಿಸಲಾಯಿತು. ಬಳಿಕ ಕಲ್ಲೇಶ್ವರ ದೇವಸ್ಥಾನದಲ್ಲಿ ಶಿವಲಿಂಗದ ಮೇಲೆ ಧಾರಾಪಾತ್ರೆ ಕಟ್ಟಿ ಜಲಾಭಿಷೇಕ ಆರಂಭಿಸಲಾಯಿತು.
ಐದು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ನಡೆಯಲಿದೆ. ಜು.6 ರಂದು ಗ್ರಾಮದ ಹೊರ ವಲಯದಲ್ಲಿರುವ ಮಳೆ ಮಲ್ಲಪ್ಪ ದೇಗುಲದಲ್ಲಿ ಮಳೆಗಾಗಿ ವಿಶೇಷ ಪೂಜೆ ನೆರವೇರಿಸಿ ಸಂಜೆ ಕಲ್ಲೇಶ್ವರ ದೇವಸ್ಥಾನದಲ್ಲಿ ಮಹಾ ಮಂಗಳಾರತಿಯೊಂದಿಗೆ ಪೂಜೆ ಸಂಪನ್ನಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net