ಕೂಡ್ಲಿಗಿಯಲ್ಲಿ ಭವ್ಯ ರಾಯರ ಮಠ ನಿರ್ಮಾಣ

ರಾಯರ ಮಠ ನಿರ್ಮಾಣ ಕುರಿತಾಗಿ ಕೂಡ್ಲಿಗಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್ ಶೆಟ್ಟಿ ಮಾತನಾಡಿದರು. ಜೋಯಿಸ್ ಹಯವದನಚಾರ್, ಎಸ್. ವಿರೂಪಾಕ್ಷ ಮೂರ್ತಿ, ಜಿಂಕಾಲ್ ನಾಗಮಣಿ, ನವೀನ್ ಶೆಟ್ಟಿ ಇದ್ದರು.
ರಾಯರ ಮಠ ನಿರ್ಮಾಣ ಕುರಿತಾಗಿ ಕೂಡ್ಲಿಗಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್ ಶೆಟ್ಟಿ ಮಾತನಾಡಿದರು. ಜೋಯಿಸ್ ಹಯವದನಚಾರ್, ಎಸ್. ವಿರೂಪಾಕ್ಷ ಮೂರ್ತಿ, ಜಿಂಕಾಲ್ ನಾಗಮಣಿ, ನವೀನ್ ಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಿತಿ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಮಾಹಿತಿ
  • ಮಂತ್ರಾಲಯ ಶ್ರೀಗಳ ನೇತೃತ್ವದಲ್ಲಿ ಶೀಘ್ರ ಭೂಮಿಪೂಜೆ

ಕೂಡ್ಲಿಗಿ: ಪಟ್ಟಣದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಮಠವನ್ನು ಭವ್ಯವಾಗಿ ನಿರ್ಮಾಣ ಮಾಡಲು ಸದ್ಭಕ್ತರು ಮುಂದಾಗಬೇಕು ಎಂದು ಮಠದ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್ ಶೆಟ್ಟಿ ಹೇಳಿದರು.

ರಾಘವೇಂದ್ರ ಸ್ವಾಮಿಗಳ ಮಠದ ಅಭಿವೃದ್ಧಿ ಸಮಿತಿಯನ್ನು ನೋಂದಣಿ ಮಾಡಿಸಿ, ನಂತರ ನಡೆದ ಸಭೆಯಲ್ಲಿ ಮಾತನಾಡಿದರು. ನೂತನ ಮಠವನ್ನು ಗುಡೇಕೋಟೆ ರಸ್ತೆಯಲ್ಲಿರುವ ಸುಕೋ ಬ್ಯಾಂಕ್ ಹಿಂಬದಿಯ ವಿ.ಎಸ್.ಆರ್. ಗ್ರೀನ್ ಸಿಟಿ ಕಾಲನಿಯಲ್ಲಿ ಭವ್ಯವಾಗಿ ನಿರ್ಮಾಣ ಮಾಡುವುದು ಪಟ್ಟಣದ ಸದ್ಭಕ್ತರ ಅಭಿಲಾಷೆ. ಆದ್ದರಿಂದ ವಿವಿಧ ಸಮುದಾಯಗಳ ಭಕ್ತರನ್ನು ಒಳಗೊಂಡಂತೆ 25 ಜನರ ಆಡಳಿತ ಮಂಡಳಿ ರಚನೆಯಾಗಿದೆ ಎಂದರು.
ಮಠಕ್ಕೆ ಈಗಾಗಲೇ ಮಂತ್ರಾಲಯ ಶ್ರೀಗಳ ಆಶೀರ್ವಾದವು ದೊರಕಿದ್ದು, ಅವರ ನೇತೃತ್ವದಲ್ಲಿಯೇ ಇಡೀ ಕಟ್ಟಡ ನಿರ್ಮಾಣವಾಗಲಿದೆ. 10,080 ಚದರ ಅಡಿಯ ನಿವೇಶನವನ್ನು ರಾಯರ ಮಠ ನಿರ್ಮಾಣಕ್ಕೆ ಉಚಿತವಾಗಿ ನೀಡಿದ್ದೇನೆ. ಅತಿ ಶೀಘ್ರದಲ್ಲೇ ಮಂತ್ರಾಲಯ ಶ್ರೀಗಳು ಭೂಮಿಪೂಜೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಿ, ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಕಾಮಗಾರಿಗೆ ಮುಂದಾಗುವುದು ಎಂದರು.
ಹಿರಿಯ ಮುಖಂಡರಾದ ಬಿ.ಎಸ್. ಆನಂದ ಬಾಬು, ಬಂಡ್ರಿ ವಿಜಯಕುಮಾರ್, ಎಸ್. ವಿರೂಪಾಕ್ಷ ಮೂರ್ತಿ, ಜೋಯಿಸ್ ಹಯವದನಚಾರ್, ಸಮಿತಿಯ ನಾಗಮಣಿ ಜಿಂಕಾಲ್, ಬ್ಯಾಳಿ ಗೌರಮ್ಮ, ಜೆ.ಎಸ್. ಪರಿಮಳ, ಜಿ.ಕೆ. ಮುರುಳೀಧರ, ಗಂಟಿ ಗುರುರಾಜ ಶೆಟ್ಟಿ, ರಾಮು ಕಾಟ್ವಾ, ವಿನೋದ್ ಕಲಾಲ್, ಜಿ.ಪಿ. ರಂಗನಾಥ್, ಸೋಮಶೇಖರ ಪಾಟೀಲ್, ಮಾಳ್ಗಿ ಗುರುರಾಜ, ವಿನಾಯಕ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಬಿ.ಕೆ. ರಾಘವೇಂದ್ರ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net