ಹೊಸಪೇಟೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ಭಾನುವಾರ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಹಿನ್ನೆಲೆ ವಿಜಯೋತ್ಸವ ಆಚರಿಸಲಾಯಿತು. ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಕಾರ್ಯಕರ್ತರಾದ ತಾಳೂರು ವೀರಭದ್ರ, ಸಜ್ಜಾತ್ ಖಾನ್, ರಘು, ನಾಗರಾಜ್ ಇತರರಿದ್ದರು.
ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಹಿನ್ನೆಲೆ ಸಿಹಿ ಹಂಚಿ ಸಂಭ್ರಮ
ಹೊಸಪೇಟೆ: ತಮಿಳುನಾಡಿನ ಸಮಿಶ್ರ ಸರ್ಕಾರದ ಸಾಧನೆ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಸ್ವಾಗತಿಸಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದಿಂದ ನಗರದ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ಭಾನುವಾರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಘಟಕದ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಮಾತನಾಡಿ, ದಕ್ಷಿಣ ಭಾರತದಲ್ಲಿ ಮನುವಾದಿ ಸಿದ್ಧಾಂತದ ಬಿಜೆಪಿ ಪಕ್ಷವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಎನ್‌ಡಿಎಗೆ ಹಿನ್ನಡೆಯಾಗಿರುವುದು ಕೋಮು ಭಾವನೆ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ತಮಿಳುನಾಡಿನ ಮಾದರಿ ಆಡಳಿತ ಮತ್ತು ಸಮಿಶ್ರ ಸರ್ಕಾರದ ಯಶಸ್ಸು ದೇಶಕ್ಕೆ ಪೂರಕವಾಗಿದೆ ಎಂದರು.