ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಕೊಟ್ಟೂರು-ಜಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಬಿಟ್ಟು ಹೋಗಿದ್ದ ಪರ್ಸ್‌ನಲ್ಲಿದ್ದ 10 ಗ್ರಾಂ ಚಿನ್ನ ಹಾಗೂ ಒಂದು ಸಾವಿರ ರೂಪಾಯಿಯನ್ನು ಕೂಡ್ಲಿಗಿ ಡಿಪೋ ಬಸ್ ಕಂಡಕ್ಟರ್ ಬಸವರಾಜ್ ಮಹಿಳೆಗೆ ಹಿಂದಿರುಗಿಸಿದರು.
ಕೊಟ್ಟೂರು-ಜಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಬಿಟ್ಟು ಹೋಗಿದ್ದ ಪರ್ಸ್‌ನಲ್ಲಿದ್ದ 10 ಗ್ರಾಂ ಚಿನ್ನ ಹಾಗೂ ಒಂದು ಸಾವಿರ ರೂಪಾಯಿಯನ್ನು ಕೂಡ್ಲಿಗಿ ಡಿಪೋ ಬಸ್ ಕಂಡಕ್ಟರ್ ಬಸವರಾಜ್ ಮಹಿಳೆಗೆ ಹಿಂದಿರುಗಿಸಿದರು.
Published on
ಕೊಟ್ಟೂರು: ಬಸ್‌ನಲ್ಲಿ ಮಹಿಳೆ ಬಿಟ್ಟುಹೋಗಿದ್ದ ಪರ್ಸ್‌ನಲ್ಲಿದ್ದ 10 ಗ್ರಾಂ ಚಿನ್ನ ಹಾಗೂ ಒಂದು ಸಾವಿರ ರೂಪಾಯಿಯನ್ನು ಕಂಡಕ್ಟರ್ ಬಸವರಾಜ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೂಡ್ಲಿಗಿ ಡಿಪೋ ಬಸ್‌ನಲ್ಲಿ ಮಂಗಳವಾರ ಬೈರದೇವರ ಗುಡ್ಡ ಗ್ರಾಮದ ಮಹಿಳೆ ಕೊಟ್ಟೂರಿನಿಂದ ಉಜ್ಜಯಿನಿಗೆ ಪ್ರಯಾಣಿಸುತ್ತಿದ್ದು, 10 ಗ್ರಾಂ ಚಿನ್ನ ಹಾಗೂ ಒಂದು ಸಾವಿರ ರೂಪಾಯಿಯಿದ್ದ ಪರ್ಸ್ ಬಿಟ್ಟುಹೋಗಿದ್ದರು. ಕಂಡಕ್ಟರ್ ಬಸವರಾಜ್ ಪರ್ಸ್ ಗಮನಿಸಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಬಸ್ ಜಗಳೂರಿನಿಂದ ಹಿಂದಿರುಗುವಾಗ ಉಜ್ಜಯಿನಿ ಬಸ್ ನಿಲ್ದಾಣದಲ್ಲಿ ಮಹಿಳೆ ಇರುವುದನ್ನು ನೋಡಿ ಪರ್ಸ್ ಹಿಂದಿರುಗಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net