ಹಗರಿಬೊನಹಳ್ಳಿಯಲ್ಲಿ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on:
Copied
Follow Us
ಹಗರಿಬೊಮ್ಮನಹಳ್ಳಿ: ಮಳೆಯಾಗದೆ ಬೆಳೆ ನಾಶವಾಗಿರುವುದರಿಂದ ರೈತರು ನಷ್ಟ ಅನುಭವಿಸಿದ್ದು, ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್‌ಗೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಜಿ.ರಮೇಶ ಮಾತನಾಡಿ, ಸರಿಯಾದ ಮಳೆ ಇಲ್ಲದ ಕಾರಣ ತಾಲೂಕನಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ. ಇದರಿಂದಾಗಿ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ರೈತರಿಗೆ ಒಂದು ಎಕರೆಗೆ ಕನಿಷ್ಠ 30 ಸಾವಿರ ರೂ.ನೀಡಬೇಕೆಂದು ಒತ್ತಾಯಿಸಿದರು.
]
ಗೌರವ ಅಧ್ಯಕ್ಷ ದಳಪತಿ ಕೆ.ಕೊಟ್ರಯ್ಯ ಮಾತನಾಡಿ, ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿದರು. ಪ್ರಮುಖರಾದ ದುರುಗಪ್ಪ, ಹನುಮಂತಪ್ಪ, ಮೈಲಾರಪ್ಪ, ಕೃಷ್ಣರೆಡ್ಡಿ, ರುದ್ರಗೌಡ್ರು, ಎಚ್.ಡಿ.ಮೈಲಾರಿ ಮತ್ತಿತರರು ಇದ್ದರು.