ಸಮರ್ಪಕ ಮಾಹಿತಿ ಸಂಗ್ರಹಿಸಿ ದಾಖಲಿಸಿ

ಸಂಡೂರಿನ ಕುಮಾರಸ್ವಾಮಿ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ತರಬೇತಿ ನೀಡಿದರು.
ಸಂಡೂರಿನ ಕುಮಾರಸ್ವಾಮಿ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ತರಬೇತಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ತರಬೇತಿ
  • ಕಾರ್ಯಕ್ರಮ
  • ತಾಲೂಕು
ಸಂಡೂರು: ರಾಜ್ಯ ಚುನಾವಣಾ ಆಯೋಗ ಎಸ್‌ಐಆರ್ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ನಾಗೆಂದ್ರ ಪ್ರಸಾದ ಕೆ. ಹೇಳಿದರು.
ಪಟ್ಟಣದ ಕುಮಾರಸ್ವಾಮಿ ಶಾಲೆಯಲ್ಲಿ ತಾಲೂಕು ಮಟ್ಟದ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ರಾಜ್ಯ ಚುನಾವಣಾ ಆಯೋಗ ನೀಡಿದ ಫಾರ್ಮ್‌ಗಳನ್ನು ಸಂಬಂಧಿಸಿದ ಮತದಾರರಿಗೆ ನೀಡಿ ಅವರಿಂದ ಸಹಿ ಪಡೆದು ಮತಗಟ್ಟೆ ಅಧಿಕಾರಿಗಳು ಲಾಗಿನ್‌ನಲ್ಲಿ ದಾಖಲಿಸಬೇಕು. ಮರಣ ಹೊಂದಿದವರು ಮತ್ತು ಪೂರ್ಣ ಪ್ರಮಾಣದ ವಲಸೆ ಹೊಂದವರ ಮಾಹಿತಿ ದಾಖಲಿಸಬೇಕು. ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಮಾಹಿತಿ ಪಡೆದು ಲಾಗಿನ್‌ನಲ್ಲಿ ನಮೂದು ಮಾಡಬೇಕು ಎಂದರು.
ಜೂ.20ರಿಂದ ಜೂ.29ವರೆಗೆ ತರಬೇತಿ, ಜೂ.30ರಿಂದ ಜು.29ರವರೆಗೆ ಬಿಎಲ್‌ಒ ಮನೆ, ಮನೆಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಬೇಕು. ಜು.29ರಂದು ಪೋಲಿಂಗ್ ಸ್ಟೇಷನ್‌ಗಳ ಮಾಹಿತಿ, ಆ.8ರಂದು ಪಬ್ಲಿಕೇಷನ್ ಡ್ರಾಫ್ಟ್ ಎಲೆಕ್ಟ್ರಲ್ ರೋಲ್, ಆ.5ರಿಂದ ಸೆ.4ರವರೆಗೆ ಅಕ್ಷೇಪಣೆ ಸಲ್ಲಿಸಬಹುದು. ಆ.5ರಿಂದ ಅ.3ರವರೆಗೆ ಅಕ್ಷೇಪಣೆಗಳ ಪರಿಶೀಲನೆ, ಅ.10ರಂದು ಅಂತಿಮ ಪ್ರಕಟಣೆ ಪ್ರಕಟಿಸಲಾಗುವುದು ಎಂದರು.
ಸಂಡೂರು ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಾಧಿಕಾರಿ ಚಿದಾನಂದ, ಸಹಾಯಕ ಮತದಾರ ನೋಂದಣಾಧಿಕಾರಿ ಜಿ.ಅನಿಲ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net