ನಿಖರ ದತ್ತಾಂಶ ಸಂಗ್ರಹಿಸಿ ಜನಗಣತಿ ಯಶಸ್ವಿಗೊಳಿಸಿ

ಹೊಸಪೇಟೆ ಪಿಡಿಐಟಿ ಕಾಲೇಜಿನಲ್ಲಿ ಬುಧವಾರ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಉದ್ಘಾಟಿಸಿದರು. ಜಿಪಂ ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ನಗರಾಭಿವೃದ್ಧಿ ಕೋಶಾದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಶಿವಕುಮಾರ್ ಎರಗುಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಜಿಲ್ಲಾ ನೋಡಲ್ ಅಧಿಕಾರಿ ಶ್ರೀಕಾಂತ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗಣತಿದಾರರಿಗೆ ಕಾರ್ಯಗಾರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
ಹೊಸಪೇಟೆ: ಮುಂಬರುವ 2027ರ ಜನಗಣತಿ ಕಾರ್ಯವನ್ನು ಅತ್ಯಂತ ನಿಖರ ಮತ್ತು ಸ್ಪಷ್ಟ ಮಾಹಿತಿಯೊಂದಿಗೆ ವ್ಯವಸ್ಥಿತವಾಗಿ ದತ್ತಾಂಶ ಸಂಗ್ರಹಿಸುವ ಮೂಲಕ ಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಪಿಡಿಐಟಿ ಕಾಲೇಜಿನಲ್ಲಿ ಬುಧವಾರ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಗಣತಿ ಕಾರ್ಯವು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವುದರಿಂದ, ಗಣತಿದಾರರು ನಿಗದಿಪಡಿಸಿದ ಮೊಬೈಲ್ ಆಪ್‌ನ್ನು ಸಮರ್ಪಕವಾಗಿ ಬಳಸಬೇಕು. ತಾಂತ್ರಿಕ ತೊಂದರೆಗಳಿದ್ದಲ್ಲಿ ತಕ್ಷಣವೇ ತಾಂತ್ರಿಕ ತಂಡದ ಗಮನ ತಂದು ಪರಿಹಾರ ಕಂಡುಕೊಳ್ಳಬೇಕು. ಗಣತಿ ಕಾರ್ಯವು 2 ಹಂತಗಳಲ್ಲಿ ನಡಯಲಿದ್ದು, 15 ದಿನಗಳ ಕಾಲ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಪ್ರತಿಯೊಬ್ಬ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ, ಶೇ.100ರಷ್ಟು ನಿಖರ ಮಾಹಿತಿ ಸಂಗ್ರಹಿಸಬೇಕು. ಯಾವುದೇ ಮಾಹಿತಿಯನ್ನು ಅಂದಾಜಿನ ಮೇಲೆ ದಾಖಲಿಸಬಾರದು. ಗಣತಿದಾರರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಈ ಗಣತಿ ಕಾರ್ಯಕ್ಕೆ 27 ಚಾರ್ಜ್ ಆಫಿಸರ್, 44 ಫೀಲ್ಡ್ ತರಬೇತುದಾರರು, 16 ತಾಂತ್ರಿಕ ಸಹಾಯಕರು, 499 ಮೇಲ್ವಿಚಾರಕರನ್ನು ಹಾಗೂ 2847 ಗಣತಿದಾರರು ನೇಮಿಸಲಾಗಿದೆ. 2467 ಹೌಸ್ ಲಿಸ್ಟಿಂಗ್ ಬ್ಲಾಮಕ್ ಗುರುತಿಸಲಾಗಿದ್ದು, ಒಬ್ಬ ಗಣತಿದಾರರಿಗೆ 250 ಮನೆಗಳ ಹಂಚಿಕೆ ಮಾಡಲಾಗಿದೆ ಎಂದರು.
ಈ ಜನಗಣತಿಯು ದೇಶದ ಭವಿಷ್ಯ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಬುನಾದಿಯಾಗಲಿದೆ. ಇದರಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಎಚ್ಚರಿಸಿ ಕಾರ್ಯನಿರ್ವಹಿಸಬೇಕು. ಪ್ರತಿದಿನದ ಪ್ರಗತಿಯನ್ನು ಆಯಾ ದಿನವೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಗಣತಿದಾರರು ಸೌಜನ್ಯದಿಂದ ವರ್ತಿಸಿ, ಗಣತಿಯ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕರು ಸಹ ಸಂಯಮದಿAದ ನಿಖರ ಮತ್ತು ಸ್ಪಷ್ಟ ಮಾಹಿತಿ ನೀಡಬೇಕು. ಸಾರ್ವಜನಿಕರು ನೀಡುವ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net