ಸದ್ಯ ಒಂದು ತಿಂಗಳಿAದ ವಿಜಯನಗರ ಸೇರಿದಂತೆ ರಾಜ್ಯದ ಉತ್ತರ ಭಾಗದಲ್ಲಿ ಕನಿಷ್ಠ ತಾಪಮಾನ 8ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುತ್ತಿದೆ. ಇದರಿಂದಾಗಿ ತೀವ್ರ ಚಳಿಯ ಅನುಭವವಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನತೆ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಬೆಳೆಗಳನ್ನು ಈ ಚಳಿ, ಇಬ್ಬನಿ, ಶೀತಗಾಳಿಯಿಂದ ರಕ್ಷಣೆ ಮಾಡುವುದು ಹೇಗೆ? ಬಟಾ ಬಯಲಿನಲ್ಲಿ ಬೆಳೆದಿರುವ ಬೆಳೆಗಳು ಶೀತಗಾಳಿ, ಇಬ್ಬನಿಗೆ ಮುದುಡಿ ಹೋಗುತ್ತಿದ್ದು, ಸಹಜವಾಗಿಯೇ ಇಳುವರಿ ಮೇಲೆ ಪರಿಣಾಮ ಬೀರಲಾರಂಭಿಸಿದ್ದು, ರೈತರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಕೃಷಿ ಹವಾಮಾನ ತಜ್ಞರು.