ಸಹಪಠ್ಯ ಚಟುವಟಿಕೆ ಸ್ಪರ್ಧೆ ಶಿಕ್ಷಕರಿಗೆ ಸುವರ್ಣಾವಕಾಶ

ಹೊಸಪೇಟೆ ಅಮರಾವತಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿದರು. ನೋಡಲ್ ಅಧಿಕಾರಿ ರಾಜಶೇಖರ್‌, ಡಿಡಿಪಿಐ ವೇಂಕಟೇಶ ರಾಮಚಂದ್ರಪ್ಪ, ಪ್ರಭಾರ ಪ್ರಾಚಾರ್ಯ ವೀಣಾಕುಮಾರಿ ಇತರರಿದ್ದರು.
ಹೊಸಪೇಟೆ ಅಮರಾವತಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿದರು. ನೋಡಲ್ ಅಧಿಕಾರಿ ರಾಜಶೇಖರ್‌, ಡಿಡಿಪಿಐ ವೇಂಕಟೇಶ ರಾಮಚಂದ್ರಪ್ಪ, ಪ್ರಭಾರ ಪ್ರಾಚಾರ್ಯ ವೀಣಾಕುಮಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ವೇಂಕಟೇಶ ರಾಮಚಂದ್ರಪ್ಪ ಅಭಿಪ್ರಾಯ
ಹೊಸಪೇಟೆ: ವಿದ್ಯಾರ್ಥಿಗಳಂತೆಯೇ ಶಿಕ್ಷಕರಿಗೂ ಸಹಪಠ್ಯ ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಡಿಡಿಪಿಐ ವೇಂಕಟೇಶ ರಾಮಚಂದ್ರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಉಪನಿರ್ದೇಶಕರ ಕಚೇರಿಯಿಂದ ಇಲ್ಲಿನ ಅಮರಾವತಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಈ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ದೈನಂದಿನ ಪಾಠ ಪ್ರವಚನ ಒತ್ತಡಗಳಿಂದ ಸ್ವಲ್ಪ ಮಟ್ಟಿಗೆ ಒತ್ತಡವನ್ನು ದೂರ ಮಾಡಲು ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಶಿಕ್ಷಕರಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಯನ್ನ ಅನಾವರಣಗೊಳಿಸಲು ಇಲಾಖೆ ಒಳ್ಳೆಯ ಅವಕಾಶವನ್ನು ನೀಡಿದ್ದು, ಇದರ ಸದುಪಯೋಗ ಪಡೆಸಿಕೊಂಡು ರಾಜ್ಯ ಮಟ್ಟದಲ್ಲಿ ಶಿಕ್ಷಣ ಇಲಾಖೆಗೆ ಕೀರ್ತಿ ತರಬೇಕು ಎಂದರು.
ನೋಡಲ್ ಅಧಿಕಾರಿ ರಾಜಶೇಖರ್‌ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಆಶುಬಾಷಣ, ಭಕ್ತಿಗೀತೆ, ಸ್ಥಳದಲ್ಲಿ ಕಲಿಕೋಪಕರಣ ತಯಾರಿಕೆ, ರಸಪ್ರಶ್ನೆ ಸೇರಿದಂತೆ 07 ಸ್ಪರ್ಧೆಗಳನ್ನ ಆಯೋಜಿಸಲಾಗುತ್ತದೆ. ಇದರಲ್ಲಿ ವಿಜೇತರಾದವರು ರಾಜ್ಯ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ಸ್ಪರ್ಧೆಗಳು ಮುಗಿದ ನಂತರ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಭಾರ ಪ್ರಾಚಾರ್ಯ ವೀಣಾಕುಮಾರಿ, ವಿಷಯ ಪರಿವೀಕ್ಷಕ ಎಚ್.ಎಂ.ವಿಶ್ವನಾಥ ಬಸವಂತಯ್ಯ ಹಿರೇಮಠ, ಪ್ರೌಢ ಶಾಲಾ ಮುಖ್ಯಶಿಕ್ಷಕರಾದ ವೆಂಕಟೇಶ್ ಕುಲಕರಣಿ, ಪ್ರವೀಣಾ ಬಿ.ಹಲಗಣಿ, ಪ್ರಮುಖರಾದ ಸಿದ್ಧರಾಧ್ಯ, ಕೆ‌.ಬಸವರಾಜ, ಆರ್.ಬಿ. ಬಸವರಾಜ, ಟಿ.ವಿಶ್ವನಾಥ, ಕೆ.ಬಿ.ತಿಮ್ಮಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net