ಸ್ವಚ್ಛತೆಯಿಂದ ಆರೋಗ್ಯ ಪರಿಸರ ಸಾದ್ಯ

ಹೊಸಪೇಟೆ ಉಪವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ ಮೇಟಿ, ಸಿಸ್ಟರ್ ಹನೀಫಾ, ಲ್ಯಾಬ್ ಟೆಕ್ನೇಷಿಯನ್ ಸುಮಿತ್ರಮ್ಮ ಇತರರಿದ್ದರು.
ಹೊಸಪೇಟೆ ಉಪವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ ಮೇಟಿ, ಸಿಸ್ಟರ್ ಹನೀಫಾ, ಲ್ಯಾಬ್ ಟೆಕ್ನೇಷಿಯನ್ ಸುಮಿತ್ರಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ ಮೇಟಿ ಅಭಿಪ್ರಾಯ
ಹೊಸಪೇಟೆ: ನಗರದ ಉಪವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ಆಸ್ಪತ್ರೆಯ ಸಿಬ್ಬಂದಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಹಾಗೂ ಜಿಲ್ಲಾ ಗೃಹ ರಕ್ಷಕ ದಳದ ಸಂಯುಕ್ತಾಶ್ರಯದಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಾತ್ರ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಸಾಧ್ಯ. ಹೀಗಾಗಿ ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ವೈದ್ಯೆ ಡಾ.ಆಶಾ ಕೋರಿ ಮಾತನಾಡಿ, ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೇವಲ ಸಿಬ್ಬಂದಿಯಷ್ಟೇ ಅಲ್ಲದೆ, ರೋಗಿಗಳು ಹಾಗೂ ಅವರ ಸಂಬAಧಿಕರು ಇದಕ್ಕೆ ಸಹಕರಿಸಬೇಕು. ವಿದೇಶಗಳ ಮಾದರಿಯಲ್ಲಿ ನಾವು ವಾಸಿಸುವ ಊರು ಹಾಗೂ ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಮತ್ತು ಕಾಳಜಿ ಮೂಡಬೇಕು ಎಂದರು.
ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಪಿ.ವಿ.ವೆಂಕಟೇಶ್ ಮಾತನಾಡಿ, ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಗುಜ್ಜಲ ಗಣೇಶ್ ಮಾತನಾಡಿ, ದಿನನಿತ್ಯ ಸಾವಿರಾರು ರೋಗಿಗಳು ವಿವಿಧ ಊರುಗಳಿಂದ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಆದ್ದರಿಂದ ಸ್ವಚ್ಛತಾ ಕಾರ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೈದ್ಯರಾದ ಡಾ.ಫಜಲುದ್ದೀನ್, ಡಾ.ಸಿದ್ದಲಿಂಗಪ್ಪ, ಡಾ.ಫಣೀಂಧ್ರ, ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಬಸವರಾಜ ಅಗಸರ, ಘಟಕಾಧಿಕಾರಿ ಎಂ.ಎಸ್.ಗಿರೀಶ್, ಪ್ಲಟೂನ್ ಕಮಾಂಡರ್ ವಿ.ಪರಶುರಾಮ, ಎಲ್.ವಾಲ್ಯ ನಾಯ್ಕ, ಪ್ರಮುಖರಾದ ದಾದಾ ಖಲಂದರ್, ಪರಶುರಾಮ, ರಾಮು, ರಜಾಕ್, ಕಮಲೇಶ್, ಪ್ರಕಾಶ್, ಪಾಂಡುರAಗ, ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net