ಫೋಟೋಗ್ರಾಫರ್ಸ್‌ಗಳಿಂದ ಸ್ವಚ್ಛತಾ ಕಾರ್ಯ

ಕೊಟ್ಟೂರಿನಲ್ಲಿ ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು.
ಕೊಟ್ಟೂರಿನಲ್ಲಿ ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು.
Published on
ಕೊಟ್ಟೂರು: ಕೊಟ್ಟೂರೇಶ್ವರ ಕಾರ್ತಿಕೋತ್ಸವ ಮುಗಿದ ಹಿನ್ನೆಲೆಯಲ್ಲಿ ತಾಲೂಕಿನ ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ಗಳ ತಂಡದಿಂದ ಮಂಗಳವಾರ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಯಿತು.
ಬಸ್ ನಿಲ್ದಾಣ, ಗಾಂಧಿ ವೃತ್ತ, ಉಜ್ಜಿನಿ ವೃತ್ತ, ಗಚ್ಚಿನ ಮಠ, ಕೆಳಗೇರಿ ಸೇರಿದಂತೆ ಇತರೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ತ್ಯಾಜ್ಯವನ್ನು ಸ್ವಂತ ವಾಹನದಲ್ಲಿ ಪಟ್ಟಣ ಪಂಚಾಯಿತಿ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಿದರು. ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಖಜಾಂಚಿ ಹನುಮರಡ್ಡಿ, ಬಿ.ಶಂಕರ, ಗಣೇಶ ಶಿವಶಾಲಿ, ಬಾಲಾಜಿ, ಶರತ್, ಕರಿಬಸವರಾಜ, ಕೊಟ್ರೇಶ, ವೀರೇಶ, ಪ್ರಕಾಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net