ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಎಂ.ಡಿ.ಹುಲುಗಪ್ಪ ಮಾತನಾಡಿ, ತುಂಗಭದ್ರ ಜಲಾಶಯದ ವಿಜಯನಗರ ಕಾಲದ ಬಸವಣ್ಣ ಕಾಲುವೆ ಹಾದು ಬರುವ ಮಾರ್ಗದ ಉದ್ದಕ್ಕೂ, ಚರಂಡಿ ನೀರನ್ನು ಕಾಲುವೆಗೆ ಹರಿಬಿಡಲಾಗುತ್ತಿದೆ. ಅಲ್ಲದೆ ಆಸ್ಪತ್ರೆಯ ವ್ಯಾಜ್ಯ ಸೇರಿÀದಂತೆ ನಗರದ ಕಸವನ್ನು ಕಾಲುವೆಗೆ ಎಸೆಯಲಾಗುತ್ತಿದೆ. ಇದರ ಜತೆಗೆ ಸತ್ತ ನಾಯಿ, ದನ, ಹಂದಿಗಳನ್ನು ಕಾಲುವೆಗೆ ಎಸೆಯಲಾಗುತ್ತಿದೆ. ಹೂಳು, ತ್ಯಾಜ್ಯ ಹಾಗೂ ಗಿಡಗಂಟಿಗಳಿAದ ಮುಚ್ಚಿಹೋಗಿದೆ. ಇದರಿಂದ ಕಾಲುವೆ ನೀರನ್ನೆ ನಂಬಿ ಕೃಷಿ ಚಟುವಟಿಕೆ ನಡೆಸುವ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರುವ ನೀರು ಕಲುಷಿತಗೊಂಡಿರುವುದರಿAದ ರೈತರಿಗೆ ಸೋಂಕು ತಗುಲಿ ಹಲವಾರು ಕಾಯಿಲೆಗಳಿಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿದ್ದರೆ ಎಂದು ಆಗ್ರಹಿಸಿದರು.