ಐತಿಹಾಸಿಕ ಹಂಪಿಯಲ್ಲಿ ಚಿಣ್ಣರ ಚಿಲಿಪಿಲಿ

ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಪ್ರಾರ್ಥನೆ ಮಾಡಿದ ಮಕ್ಕಳು.
ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಪ್ರಾರ್ಥನೆ ಮಾಡಿದ ಮಕ್ಕಳು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳು
  • ಐತಿಹಾಸಿಕ ತಾಣಗಳಿಗೆ ಭೇಟಿ
  • ವ್ಯಾಪಾರ ಜೋರು
ಹೊಸಪೇಟೆ: ಕೆಲ ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವದ ನೆಲೆವೀಡು ಹಂಪಿಯಲ್ಲಿ ಈಗ ಚಿಣ್ಣರ ಚಿಲಿಪಿಲಿ ಜೋರಾಗಿದೆ. ಶೈಕ್ಷಣಿಕ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳ ದಂಡು ಹಂಪಿಗೆ ಲಗ್ಗೆ ಇಡುತ್ತಿದ್ದು, ಸ್ಮಾರಕಗಳ ರಾಜಬೀದಿಗಳಲ್ಲಿ ಮಕ್ಕಳ ಕಲರವ ಪ್ರತಿಧ್ವನಿಸುತ್ತಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬೀದರ್, ವಿಜಯಪುರ ಮತ್ತು ಬೆಳಗಾವಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಗಳಿಂದಲೂ ಕಳೆದ ನಾಲೈದು ದಿನಗಳಿಂದ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳ ಉಪನ್ಯಾಸಕರು ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ. ಆಗಮಿಸುವ ಮೊದಲು ನಗರದ ಕೂಗಳತೆಯಲ್ಲಿನ ತುಂಗಭದ್ರಾ ಜಲಾಶಯಕ್ಕೂ ಭೇಟಿ ನೀಡಿ ಮಕ್ಕಳು ಹೊಸ ಅನುಭವ ಪಡೆಯುತ್ತಿದ್ದಾರೆ. ಹಂಪಿಗೆ
ನಾನಾ ಕಡೆಗಳಿಂದ ಆಗಮಿಸುತ್ತಿರುವ ಬಡವಿಲಿಂಗ, ವಿದ್ಯಾರ್ಥಿಗಳು ಹಂಪಿಯ ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ, ಉಗ್ರನರಸಿಂಹ, ವಿರೂಪಾಕ್ಷೇಶ್ವರ ದೇವಾಲಯ, ದೇವಾಲಯ, ಚಕ್ರತೀರ್ಥ ಎದುರಿನ ಬಸವಣ್ಣ ಸ್ಮಾರಕ ಹಾಗೂ ವಿಜಯವಿಠಲ ದೇವಾಲಯದ ಆವರಣದಲ್ಲಿನ ಕಲ್ಲಿನ ರಥವನ್ನು ಕಂಡು ಬೆರಗಾಗಿದ್ದಾರೆ. ಹಂಪಿ ಸ್ಮಾರಕ, ದೇವಾಲಯಗಳು ಹಾಗೂ ಕಲ್ಲು ಬಂಡೆಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಪಠ್ಯ ಪುಸ್ತಕ ಮತ್ತು ಅಂತರ್ಜಾಲದಲ್ಲಿ ನೋಡಿದ್ದ ಸ್ಮಾರಕಗಳನ್ನು ಕಣ್ಣಾರೆ ಕಂಡ ಮಕ್ಕಳು, ಇತಿಹಾಸದ ವಿಷಯವನ್ನು ಪ್ರತ್ಯಕ್ಷವಾಗಿ ಅರಿಯುತ್ತಿದ್ದಾರೆ. ಇದು ವಾರ್ಷಿಕ ಪರೀಕ್ಷೆ ಹಾಗೂ ಭವಿಷ್ಯದ ಉನ್ನತ ವ್ಯಾಸಂಗಕ್ಕೂ ಮಾರ್ಗದರ್ಶನವಾಗಲಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಸ್ಮಾರಕಗಳ ಸುತ್ತಮುತ್ತ ಕಣ್ಣು ಹಾಯಿಸಿದ ವಿದ್ಯಾರ್ಥಿಗಳ ಸಮೂಹ ಕಡೆಗಳಲ್ಲಿ ಕಂಡುಬರುತ್ತಿದೆ. ಬೇಸಿಗೆಯಲ್ಲಿ ವ್ಯಾಪಾರ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಸ್ಥಳೀಯ ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಸದ್ಯ ಕೈತುಂಬ ಕೆಲಸ ದೊರೆತಿದ್ದು, ಅವರ ಮೊಗದಲ್ಲಿ ಮಂದಹಾಸ ಮೂಡಿದೆ.
"

ಐತಿಹಾಸಿಕ ವಿಷಯಗಳನ್ನು ಕೇವಲ ಪಠ್ಯದಿಂದ ತಿಳಿದುಕೊಳ್ಳುವ ಜತೆಗೆ ಪ್ರತ್ಯಕ್ಷವಾಗಿ ಭೇಟಿ ನೀಡಿ ಅದನ್ನು ಅರಿತುಕೊಳ್ಳಲು ಸಹಾಯವಾಗಿದೆ.

"

ಹಂಪಿಯಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿ ಗಳ ಪ್ರವಾಸ ಹೆಚ್ಚಿದೆ. ಮಕ್ಕಳಿಗೆ ಇಲ್ಲಿನ ಇತಿಹಾಸ ಹಾಗೂ ಸ್ಮಾರಕಗಳ ಮಾಹಿತಿ ನೀಡಲಾಗುತ್ತಿದೆ. ಇಲ್ಲಿನ ಪರಿಸರ ನೋಡಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net