ರಸಗೊಬ್ಬರ ಖರೀದಿಗೆ ಎಫ್‌ಐಡಿ ರದ್ದು ಪಡಿಸಿ

ಹೊಸಪೇಟೆಯಲ್ಲಿ ಕೃಷಿ ಇಲಾಖೆ ಡಿಡಿ ಡಾ.ನಯೀಮ್ ಬಾಷ ಅವರಿಗೆ ಮನವಿ ಸಲ್ಲಿಸಲಾಯಿತು. ಕೃಷಿ ಸಹಾಯಕ ನಿರ್ದೇಶಕ ಮನೋಹರ್ ಗೌಡ, ಜಿಲ್ಲಾ ಅಧ್ಯಕ್ಷ ಟಿ.ನಾಗರಾಜ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ದೊಡ್ಡಗಾಳೇಪ್ಪ, ಸುರೇಶ್, ಭುವನಹಳ್ಳಿ ಬಸವರಾಜ್, ಜಾಕೀರ್ ಹುಸೇನ್, ಗಂಟೆ ಮಂಜುನಾಥ, ಮಂಜುನಾಥಸಿAಗ್, ಜಾನಕಿರಾಮ್, ರಾಮಾಂಜಿನಿ, ಸತೀಶ ಇತರರಿದ್ದರು.
ಹೊಸಪೇಟೆಯಲ್ಲಿ ಕೃಷಿ ಇಲಾಖೆ ಡಿಡಿ ಡಾ.ನಯೀಮ್ ಬಾಷ ಅವರಿಗೆ ಮನವಿ ಸಲ್ಲಿಸಲಾಯಿತು. ಕೃಷಿ ಸಹಾಯಕ ನಿರ್ದೇಶಕ ಮನೋಹರ್ ಗೌಡ, ಜಿಲ್ಲಾ ಅಧ್ಯಕ್ಷ ಟಿ.ನಾಗರಾಜ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ದೊಡ್ಡಗಾಳೇಪ್ಪ, ಸುರೇಶ್, ಭುವನಹಳ್ಳಿ ಬಸವರಾಜ್, ಜಾಕೀರ್ ಹುಸೇನ್, ಗಂಟೆ ಮಂಜುನಾಥ, ಮಂಜುನಾಥಸಿAಗ್, ಜಾನಕಿರಾಮ್, ರಾಮಾಂಜಿನಿ, ಸತೀಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗ್ರಹ
ಹೊಸಪೇಟೆ: ರಸಗೊಬ್ಬರ ಖರೀದಿಗೆ ಎಫ್‌ಐಡಿ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಜಂಟಿ ಕೃಷಿ ನಿರ್ದೇಶಕ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಡಿಎಪಿ, ಪಟಾಸ್ ಅಮೋನಿಯಂ ಸಲ್ಫೇಟ್, ಪಾಸ್‌ಪೇಟ್ ಸೇರಿದಂತೆ ಇನ್ನಿತರೆ ರಸಗೊಬ್ಬರಗಳ ಬೆಲೆ ಗಗನ ಏರಿದೆ. ಇದರಿಂದ ರೈತರಲ್ಲಿ ಆತಂಕವನ್ನುAಟು ಮಾಡಿಸಿದೆ. ಗೊಬ್ಬರದ ಬೆಲೆ ಏರಿಕೆಯಿಂದ ಬೆಳೆಗಳು ಸಹ ಏರಿಕೆ ಆಗಬೇಕಾಗಿತ್ತು. ಆದರೆ, ಸರಿಯಾದ ಬೆಲೆ ಸಿಗದೇ, ದಳ್ಳಾಳಿಗಳ ಹಾವಳಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರಿಗೆ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡಬೇಕು. ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ನೀಡಬೇಕು.
ಫಾರ್ಮರ್ ಐಡಿ (ಫಾರ್ಮರ್ ಐಡೆಂಟಿಫಿಕೇಷನ್)ಯನ್ನು ರದ್ದು ಪಡಿಸಬೇಕು. ಇದರಿಂದ ಸರ್ಕಾರಿ ಭೂಮಿ, ಹಳ್ಳ ಪರಂಪೋಕು, ಮತ್ತು ಅರಣ್ಯ ಭೂಮಿಗಳು ಮಾಡುವಂತಹ ರೈತರು ಅಂದಾಜು 60 70 ವರ್ಷಗಳಿಂದ ಉಳುಮೆ ಮಾಡಿತ್ತಿರುವ ರೈತರಿಗೆ ಎಫ್.ಐ.ಡಿ.ಯಿಂದ ಯುರಿಯಾ ಗೊಬ್ಬರ ಸಿಗುವುದಿಲ್ಲ ಎಂದು ಆಗ್ರಹಿಸಿದರು.
ಹಿಂದೆ ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಅಡಿಯಲ್ಲಿ ರೈತರಿಗೆ ಕೇಂದ್ರದಿAದ 6 ಸಾವಿರ ರೂ. ರಾಜ್ಯ ಸರ್ಕಾರ 4 ಸಾವಿರ ರೂ. ವರ್ಷಕ್ಕೆ 10 ಸಾವಿರ ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ರಾಜ್ಯ ಸರ್ಕಾರದ ಪಾಲಿನ 4 ಸಾವಿರ ರೂ. ನೀಡುತ್ತಿಲ್ಲ. ಮಣ್ಣು ಪರೀಕ್ಷೆ ಕೇಂದ್ರ ಮತ್ತು ಭತ್ತ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿಗಳ ಕರತೆ ನೀಗಿಸಬೇಕು. ಸೆಣಬು ಹಸಿರಲೆ ಗೊಬ್ಬರ ಬಂದಿಲ್ಲ. ಸರ್ಕಾರದಿಂದ ಸಬ್ಸಿಡಿ ನೀಡದೇ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ರಸಗೊಬ್ಬರದ ಅಭಾವ ಹೆಚ್ಚಾಗಬಹುದು. ಭತ್ತದ ಬೀಜವನ್ನು ಏಪ್ರಿಲ್ ತಿಂಗಳ ಒಳಗೆನೇ ಪೂರೈಸಬೇಕು ಇಲ್ಲವಾದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net