ಪ್ರತಿಯೊಬ್ಬ ಗ್ರಾಹಕನೂ ತಾನು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆ ಪ್ರಮಾಣದ ಬಗ್ಗೆ ಅರಿತಿರಬೇಕು. ಗ್ರಾಹಕನೇ ಮಾರುಕಟ್ಟೆಯ ರಾಜ ಎನ್ನುವ ಮಾತು ಅನ್ವಯವಾಗಬೇಕಾದರೆ, ಗ್ರಾಹಕರು ಸಹ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಗ್ರಾಹಕರು ವಿವಿಧ ಮಾಧ್ಯಮಗಳಲ್ಲಿ ಬಿತ್ತರಿಸುವ ಆಕರ್ಷಣೀಯ ಜಾಹೀರಾತುಗಳಿಗೆ ಮಾರು ಹೋಗಿ ಉತ್ಪನ್ನ ಖರೀದಿಸಬಾರದು. ಬದಲಾಗಿ ಉತ್ಪನ್ನದ ಗುಣಮಟ್ಟ, ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಖರೀದಿಸಬೇಕು. ಯಾವುದೇ ವಸ್ತು, ಉತ್ಪನ್ನ ಖರೀದಿಸಿದಾಗ ತಪ್ಪದೇ ಅಧಿಕೃತ ಬಿಲ್ ಅಥವಾ ರಶೀದಿ ಪಡೆಯಬೇಕು. ಉತ್ಪನ್ನ ಖರೀದಿಸಿದಾಗ ಲೋಪದೋಷ ಉಂಟಾದಾಗ ದೂರು ದಾಖಲಿಸಲು ಅಥವಾ ಗ್ರಾಹಕರ ಹಕ್ಕು ಪ್ರತಿಪಾದಿಸಲು ಸಹಕಾರಿಯಾಗಲಿದೆ. ವ್ಯಾಪಾರಸ್ಥರು ಕಡ್ಡಾಯವಾಗಿ ಮುದ್ರೆ ಹಾಕಿಸಿದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನೇ ಬಳಸಬೇಕು. ಗ್ರಾಹಕರಿಗೆ ಈ ಬಗ್ಗೆ ಅನುಮಾನವಿದ್ದಲ್ಲಿ ತಕ್ಷಣ ಸಂಬAಧಪಟ್ಟ ಇಲಾಖೆಗೆ ದೂರು ನೀಡಬಹುದು. ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಕಂಡುಬAದಲ್ಲಿ ಗ್ರಾಹಕರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ . ಕಾನೂನಾತ್ಮಕವಾಗಿ ನ್ಯಾಯ ಪಡೆಯಲು ಅವಕಾಶವಿದೆ ಎಂದರು.