ಪ್ರತಿಯೊಬ್ಬ ಗ್ರಾಹಕನೂ ತಾನು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆ ಪ್ರಮಾಣದ ಬಗ್ಗೆ ಅರಿತಿರಬೇಕು. ಗ್ರಾಹಕನೇ ಮಾರುಕಟ್ಟೆಯ ರಾಜ ಎನ್ನುವ ಮಾತು ಅನ್ವಯವಾಗಬೇಕಾದರೆ, ಗ್ರಾಹಕರು ಸಹ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಗ್ರಾಹಕರು ವಿವಿಧ ಮಾಧ್ಯಮಗಳಲ್ಲಿ ಬಿತ್ತರಿಸುವ ಆಕರ್ಷಣೀಯ ಜಾಹೀರಾತುಗಳಿಗೆ ಮಾರು ಹೋಗಿ ಉತ್ಪನ್ನ ಖರೀದಿಸಬಾರದು. ಬದಲಾಗಿ ಉತ್ಪನ್ನದ ಗುಣಮಟ್ಟ, ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಖರೀದಿಸಬೇಕು. ಯಾವುದೇ ವಸ್ತು, ಉತ್ಪನ್ನ ಖರೀದಿಸಿದಾಗ ತಪ್ಪದೇ ಅಧಿಕೃತ ಬಿಲ್ ಅಥವಾ ರಶೀದಿ ಪಡೆಯಬೇಕು.