ಬಸ್ ಸಂಚಾರ ಸಮರ್ಪಕವಾಗಿರಲಿ

ಹರಪನಹಳ್ಳಿಗೆ ಸಮಯಕ್ಕೆ  ಸರಿಯಾಗಿ ಬಸ್ ಓಡಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹರಪನಹಳ್ಳಿಗೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ
  • ಸೌಲಭ್ಯ
  • ತಿಂಗಳಿಂದ
ಹರಪನಹಳ್ಳಿ: ಶಾಲೆ-ಕಾಲೇಜಗಳಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಕೈಗೊಳ್ಳಲು ಒತ್ತಾಯಿಸಿ ನಿಲವಂಜಿ, ಎಂ.ಪಿ.ಪ್ರಕಾಶ್ ನಗರ, ಲೋಲೇಶ್ವರ ಮತ್ತು ಪೃಥ್ವೇಶ್ವರ ಗ್ರಾಮದ ವಿದ್ಯಾರ್ಥಿಗಳು ನಿಲುವಂಜಿ ಬಳಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಈ ಮೊದಲು ಬೆಳಗ್ಗೆ 9 ಗಂಟೆಗೆ ನಾಲ್ಕು ಹಳ್ಳಿಗಳ ವಿದ್ಯಾರ್ಥಿಗಳಿಗಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿತ್ತು. ಕಳೆದೆರಡು ತಿಂಗಳಿಂದ ಬಸ್ 9.50 ಬರುತ್ತಿದೆ.
ಇದರಿಂದಾಗಿ ನಿತ್ಯ ಹರಪನಹಳ್ಳಿಗೆ ಶಿಕ್ಷಣ ಪಡೆಯಲು ತೆರಳುವ 60 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಚಿಗಟೇರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು. ಗ್ರಾಮಸ್ಥರಾದ ಶ್ರೀಶೈಲಮೂರ್ತಿ ಕೆ.ಎಚ್., ದುರುಗಪ್ಪ, ಅಶೋಕ, ಷರೀಫ್ ಸಾಹೇಬ್, ವಿಷ್ಣು, ಅಣ್ಣಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net