ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೆ.33 ಮೀಸಲಾತಿ ಜಾರಿಗೆ ಕೂಡ್ಲಿಗಿಯಲ್ಲಿ ಗ್ರೇಡ್2 ತಹಸೀಲ್ದಾರ್ ರಾಮಸ್ವಾಮಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷೆ ಟಿ.ಭಾಗ್ಯ, ಬಿ.ಟಿ.ಗುದ್ದಿ ಚಂದ್ರು, ಯಮುನಮ್ಮ, ಈರಮ್ಮ, ಲೀಲಾವತಿ, ಶ್ರೀದೇವಿ, ಚಂದನ, ಕವಿತಾ, ಹುಲಿಗೆಮ್ಮ, ಸೋನಿಕಾ ಇದ್ದರು.
ಕೂಡ್ಲಿಗಿ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಸಂವಿಧಾನದ 106 ನೇ ತಿದ್ದುಪಡಿಯನ್ನು ತ್ವರಿತವಾಗಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ರಾಮಸ್ವಾಮಿ ಮುಖಾಂತರ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷೆ ಟಿ.ಭಾಗ್ಯ ಮಾತನಾಡಿ, ಯಾವುದೇ ಷರತ್ತುಗಳು ಇಲ್ಲದೆ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. ಜನಗಣತಿ ಹಾಗೂ ಕ್ಷೇತ್ರ ಪುನವಿರ್ಂಗಂಡಣೆ ಪ್ರಕ್ರಿಯೆಯೊಂದಿಗೆ ಜೋಡಿಸಿರುವ ಷರತ್ತುಗಳನ್ನು ತೆಗೆದುಹಾಕಬೇಕು.
ಕಳೆದ ಒಂದು ತಿಂಗಳಿನಿಂದ ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟ ರಾಜ್ಯಾದ್ಯಂತ ಜನಾಭಿಪ್ರಾಯ ಅಭಿಯಾನ ನಡೆಸುತ್ತಿದೆ. ಸಮುದಾಯ, ಸಾರ್ವಜನಿಕರ ಸಭೆ ನಡೆಸುವುದರೊಂದಿಗೆ ರಾಜಕೀಯ ಪ್ರಮುಖರು, ಗಣ್ಯರು, ಸಾಹಿತಿಗಳು, ಸಮಾಜಮುಖಿ ಚಿಂತಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದೆ ಎಂದು ತಿಳಿಸಿದರು.