ಸಕ್ಕರೆ ಕಾರ್ಖಾನೆ ನಿರ್ಮಿಸಿಕೊಡಿ

ಕನ್ನಡ ವಿವಿ ಹೆಲಿಪ್ಯಾಡ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ರೈತ ಸಂಘದ ಸಂಚಾಲಕ ಗಂಟೆ ಸೋಮಶೇಖರ್ ಮನವಿ ಸಲ್ಲಿಸಿದರು. ಸಂಸದರಾದ ಈ.ತುಕರಾಂ, ರಾಜಶೇಖರ್ ಹಿಟ್ನಾಳ್, ಶಾಸಕ ಎಚ್.ಆರ್.ಗವಿಯಪ್ಪ, ಪ್ರಮುಖರಾದ ದಮ್ಮೂರು ಮಂಜುನಾಥ, ಪರಶುರಾಮ, ಪಂಪಪಾತಿ ಇತರರಿದ್ದರು.
ಕನ್ನಡ ವಿವಿ ಹೆಲಿಪ್ಯಾಡ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ರೈತ ಸಂಘದ ಸಂಚಾಲಕ ಗಂಟೆ ಸೋಮಶೇಖರ್ ಮನವಿ ಸಲ್ಲಿಸಿದರು. ಸಂಸದರಾದ ಈ.ತುಕರಾಂ, ರಾಜಶೇಖರ್ ಹಿಟ್ನಾಳ್, ಶಾಸಕ ಎಚ್.ಆರ್.ಗವಿಯಪ್ಪ, ಪ್ರಮುಖರಾದ ದಮ್ಮೂರು ಮಂಜುನಾಥ, ಪರಶುರಾಮ, ಪಂಪಪಾತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ರೈತ ಸಂಘದಿAದ ಮನವಿ
ಹೊಸಪೇಟೆ: ಕಳೆದ ಚುನಾವಣೆಯಲ್ಲಿ ಭರವಸೆ ನೀಡಿದ ಸಕ್ಕರೆ ಕಾರ್ಖಾನೆ ಆರಂಭ ಸೇರಿಂತೆ ಇತರೆ ಬೇಡಿಕೆಗಳ ಈಡೇರಿಕೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕನ್ನಡ ವಿವಿ ಹೆಲಿಪ್ಯಾಡ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ಕಳೆದ ಚುನಾವಣೆಯಲ್ಲಿ ಭರವಸೆ ನೀಡಿದ್ದೀರಿ. ಆದರೆ, ಈ ವರೆಗೆ ಕಾರ್ಖಾನೆ ಕಾರ್ಯಗತಕ್ಕೆ ಬಂದಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದೊಂದ ಈ ಭಾಗದ ರೈತರಿಗೆ ಮಾಡಿದ ದ್ರೋಹವಾಗಿದೆ. ಕಬ್ಬು ಬೆಳೆಗಾರರು ಬೇಡಿಕೆಯಂತೆ ಸ್ಥಳೀಯವಾಗಿ ಕಾರ್ಖಾನೆ ಇಲ್ಲದೇ ನಷ್ಟದಲ್ಲಿ ಕಬ್ಬು ಸಾಗಿಸುವಂತಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿನೊಂದಿಗೆ ಆಟವಾಡುವುದನ್ನು ನಿಲ್ಲಿಸಿ, ಕೂಡಲೇ ಕಾರ್ಖಾನೆ ಪ್ರಾರಂಭಿಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದ ನಿರ್ಮಾಣದ ವೇಳೆ ರೈತರು ತಮ್ಮ ಫಲವತ್ತಾದ ಸಾಗುವಳಿ ಜಮೀನಿನನ್ನು ತ್ಯಾಗ ಮಾಡಿದ್ದಾರೆ. ಅವರಿಗೆ ಪರ್ಯಾಯವಾಗಿ ಭೂಮಿ ನೀಡಿದರೂ, ಅವರಿಗೆ ಅಧಿಕೃತವಾಗಿ ಹಕ್ಕು ಪತ್ರ (ಪಟ್ಟಾ) ನೀಡದೆ ಸರ್ಕಾರ ವಂಚಿಸುತ್ತಿದೆ. ಹಕ್ಕು ಪತ್ರವಿಲ್ಲದೆ ರೈತರು ಯಾವುದೇ ಸಾಲ ಸೌಲಭ್ಯವಾಗಲಿ ಅಥವಾ ಸರ್ಕಾರದ ಸವಲತ್ತುಗಳನ್ನಾಗಲಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹತ್ತಾರು ವರ್ಷಗಳಿಂದ ಶಾಂತಿಯುತವಾಗಿ ಮನವಿ ಮಾಡಿದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ಪಟ್ಟಾ ವಿತರಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net