

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ತುಂಗಭದ್ರಾ ನದಿಯಲ್ಲಿ ಅಂದಾಜು40 ವರ್ಷದಅಪರಿಚಿತ ಪುರುಷನಶವಪತ್ತೆಯಾಗಿದ್ದು, ಶವಇರುವಸ್ಥಳತಮ್ಮವ್ಯಾಪ್ತಿಗೆ ಬರುವುದಿಲ್ಲ ಎಂದುಎರಡುಜಿಲ್ಲೆಗಳ ಪೊಲೀಸರು ಗಡಿವಾಗ್ವಾದಕ್ಕಿಳಿದ ಘಟನೆವಿಜಯನಗರ-ಕೊಪ್ಪಳಗಡಿಭಾಗದಲ್ಲಿ ಶುಕ್ರವಾರ ನಡೆದಿದೆ.
ವಿಜಯನಗರ ಮತ್ತುಕೊಪ್ಪಳಜಿಲ್ಲೆಗಳಿಗೆ ತುಂಗಭದ್ರಾ ನದಿಗಡಿಯಾಗಿದೆ. ಎರಡುದಂಡೆಯಿಂದ ತಲಅರ್ದಭಾಗ ಗಡಿಹಂಚಿಕೊಂಡಿವೆ. ಆದರೆ, ಶುಕ್ರವಾರ ಬುಕ್ಸಾಗರಸೇತುವೆಯ ಸಮೀಪನದಿಯಲ್ಲಿ ತೇಲಿಬಂದಶವತಮ್ಮವ್ಯಾಪ್ತಿಗೆ ಬರಲ್ಲಎಂದುಎರಡುಜಿಲ್ಲೆಯ ಪೊಲೀಸರು ಗೊಂದಲಕಿಡ್ಡಾಗಿದ್ದರು. ನದಿಯಲ್ಲಿ ತೇಲಿಬಂದಿರುವುದನ್ನು ಸಾರ್ವಜನಿಕರು ಗಮನಿಸಿಪೊಲೀಸರಿಗೆ ಮಾಹಿತಿನೀಡಿದ್ದಾರೆ. ನದಿತೀರದಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತಿದ್ದರು. ವಿಷಯತಿಳಿದುಘಟನಾಸ್ಥಳಕ್ಕೆ ಆಗಮಿಸಿದ ತಾಲೂಕಿನ ಕಮಲಾಪುರ ಹಾಗೂಕೊಪ್ಪಳಜಿಲ್ಲೆಯ ಗಂಗಾವತಿ ಪೊಲೀಸ್ಠಾಣೆಸಿಬ್ಬಂದಿ, ಮೊದಲುಮಾನವೀಯತೆ ಮೆರೆದುಶವಹೊರತೆಗೆಯುವ ಬದಲುಸ್ಥಳಾಧಿಕಾರ (ವ್ಯಾಪ್ತಿ) ಕುರಿತುಕೆಲಕಾಲವಾಗ್ವಾದ ನಡೆಸಿದರು. ಶವಬಿದ್ದಿರುವ ಜಾಗತಮಗೆಸೇರಿದ್ದಲ್ಲ ಎಂದುಉಭಯಠಾಣೆಯಪೊಲೀಸರು ಗೊಂದಲಸೃಷ್ಟಿಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಕಮಲಾಪುರದ ಪೊಲೀಸರೇ ಸ್ಥಳೀಯಮೀನುಗಾರರ ಸಹಾಯವನ್ನು ಪಡೆದುಶವಹೊರತಗೆಸಿದರು. ಮೃತನಗುರುತುಇನ್ನುಪತ್ತೆಯಾಗಿಲ್ಲ. ಸಾವಿಗೆನಿಖರಕಾರಣವೇನು? ಇದುಆತ್ಮಹತ್ಯೆಯೋ ಅಥವಾಕೊಲೆಯೋಎಂದುಪೊಲೀಸರು ತನಿಖೆಕೈಗೆತ್ತಿಕೊಂಡಿದ್ದಾರೆ.