

ಪ್ರಮುಖ ಮುಖ್ಯಾಂಶಗಳು
ಹಂಪಿಗೆ ಬರುವ ಪ್ರವಾಸಿಗರಿಗೆ ಇಲ್ಲಿ ಇರುವ ಕಮಲಾಪುರ ಕೆರೆ ಕೂಡ ಆಕರ್ಷಣೀಯ ತಾಣವಾಗಿದೆ. ಇನ್ನಷ್ಟು ಆಕರ್ಷಣೆಯಾಗಿಸಲು ಕಾಯಂ ದೋಣಿ ವಿಹಾರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶೇ.20ರಿಂದ 25 ಲಾಭಾಂಶದಲ್ಲಿ ಇಲಾಖೆಗೆ ಬರಲಿದೆ.
ಕಮಲಾಪುರ ಕೆರೆ ಮೀನುಗಾರರಿಗೆ ಜೀವಾಳವಾಗಿದೆ. ಮೀನು ಹಿಡಿದು ಜೀವಾನ ಸಾಗಿಸಬೇಕು. ದೋಣಿ ವಿಹಾರದಿಂದ ಮೀನು ಹಿಡಿಯಲು ಸಮಸ್ಯೆ ಆಗಲಿದೆ. ಬಲೆಗಳು ಹಾಕಲು ಆಗಲ್ಲ. ಮೀನುಗಳು ಬೆಳವಣಿಗೆ ಸಮಸ್ಯೆ ಆಗಲಿದೆ. ಈ ಕೆಲಸ ಬಿಟ್ಟರೆ ಬೇರೆ ಗತಿಯಿಲ್ಲ. ನಮಗು ಕುಟುಂಬಗಳಿವೆ ಅಧಿಕಾರಿಗಳು ಇತ್ತ ಗಮನ ಹರಿಸಲಿ.