ಹೊಸಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ

ಹೊಸಪೇಟೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ವಿಜಯೋತ್ಸವ ಆಚರಿಸಿದರು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಮುಖರಾದ ಅಶೋಕ್ ಜೀರೆ, ಗುಜ್ಜಲ್ ಶ್ರೀನಿವಾಸ, ರಾಮಾಜೀ ನಾಯ್ಕ ಇತರರಿದ್ದರು.
ಹೊಸಪೇಟೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ವಿಜಯೋತ್ಸವ ಆಚರಿಸಿದರು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಮುಖರಾದ ಅಶೋಕ್ ಜೀರೆ, ಗುಜ್ಜಲ್ ಶ್ರೀನಿವಾಸ, ರಾಮಾಜೀ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಗೆಲವು ಹಿನ್ನೆಲೆ
ಹೊಸಪೇಟೆ: ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆ ವಿಜಯನಗರ ಜಿಲ್ಲಾ ಬಿಜೆಪಿಯಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಕಾರ್ಯಕರ್ತರು ಸೋಮವಾರ ವಿಜಯೋತ್ಸವವನ್ನು ಆಚರಿಸಲಾಯಿತು.
ನಂತರ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಜಯಕಾರ ಹಾಕಿದರು. ಪಶ್ಚಿಮ ಬಂಗಾಳದಲ್ಲಿ ಪಡೆದ ಜಯಕ್ಕಾಗಿ ದೀದಿ ಹೋದರು, ದುರ್ಗಾ ಬಂದರು ಎಂಬ ಘೋಷಣೆಯೊಂದಿಗೆ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಡಿ ಕೊಟ್ರೇಶ್ ಮಾತನಾಡಿ, ನಮ್ಮ ದೇಶದಲ್ಲಿ ನಡೆದ
ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾರರು ಸ್ಪಷ್ಟವಾಗಿ, ಮೋದಿ ಜೀ ಹಾಗೂ ಭಾರತೀಯ ಜನತಾ ಪಕ್ಷದ ಪರವಾಗಿ ನಿಲುವನ್ನು ವ್ಯಕ್ತಪಡಿಸುವುದನ್ನು ಫಲಿತಾಂಶದ ಮೂಲಕ ನೋಡುತ್ತಿದ್ದೇವೆ. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಬಹುದಾಗಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಸ್ಪಷ್ಟವಾಗಿದೆ. ಅಸ್ಸಾಂನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುತ್ತಿದೆ. ಪುದುಚೇರಿಯಲ್ಲಿ ಸಹ ಎರಡನೇ ಬಾರಿ ಸರ್ಕಾರ ರಚನೆ ಆಗಲಿದೆ. ತಮಿಳುನಾಡಿನಲ್ಲಿಯೂ ಎನ್‌ಡಿಎ ಬೆಂಬಲದಿAದ ಸರ್ಕಾರ ರಚನೆ ಮಾಡುವ ಸಾದ್ಯತೆಯಿದೆ ಎಂದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಮುಖರಾದ ಅಶೋಕ್ ಜೀರೆ, ಗುಜ್ಜಲ್ ಶ್ರೀನಿವಾಸ, ರಾಮಾಜೀ ನಾಯ್ಕ, ಜಗದೀಶ್ ಕಮಟಗಿ, ರೇವಣ್ಣ ಸಿದ್ಧಪ್ಪ, ಮಧುರಚನ್ನ ಶಾಸ್ತ್ರಿ ಹಿರೇಮಠ್, ಎಚ್.ನಟರಾಜ್, ಎಂ .ಬಿ.ಉಮಾದೇವಿ, ಶಾಂತಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net