ಕಳ್ಳರ ಪಕ್ಷ ಕಾಂಗ್ರೆಸ್ಗೆ ಬಿಹಾರಿಗರು ತಕ್ಕ ಪಾಠ

ಹೊಸಪೇಟೆಯಲ್ಲಿ ಬಿಹಾರ ಚುನಾವಣೆಯಲಲಿ ಎನ್ಡಿಎ ಮೈತ್ರಿಕೂಟ ಗೆಲುವು ದೊರೆತ ಹಿನ್ನಲೆಯಲ್ಲಿ ಬಿಜೆಪಿಯಿಂದ ವಿಜಯೋತ್ಸವ ಆಚರಿಲಾಯಿತು.
ಹೊಸಪೇಟೆಯಲ್ಲಿ ಬಿಹಾರ ಚುನಾವಣೆಯಲಲಿ ಎನ್ಡಿಎ ಮೈತ್ರಿಕೂಟ ಗೆಲುವು ದೊರೆತ ಹಿನ್ನಲೆಯಲ್ಲಿ ಬಿಜೆಪಿಯಿಂದ ವಿಜಯೋತ್ಸವ ಆಚರಿಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಪಕ್ಷದಿಂದ ನನಡೆದ ವಿಜಯೋತ್ಸವದಲ್ಲಿ ಕಿಚಡಿ ಕೊಟ್ರೇಶ್ ಹೇಳಿಕೆ

ಹೊಸಪೇಟೆ:ಬಿಜೆಪಿಮತಗಳ್ಳತನ ಮಾಡಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಹಾರಿನ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಡಿಕೊಟ್ರೇಶ್ ಹೇಳಿದರು.

ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ದೊರೆತ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ನಗರದ ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಬಳಿಕ ಮಾತನಾಡಿದರು.

ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಎನ್ಡಿಎ ಮೈತ್ರಿಗೆ 200ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದೊರೆತಿದ್ದು ಮೋದಿ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷವೇ ದೊಡ್ಡ ಕಳ್ಳರ ಪಾರ್ಟಿಯಾಗಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಲು ಇನ್ನೋಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ರಾಹುಲ್ ಗಾಂಧಿ ಮಾಡಿದ್ದರಿಂದ ಬಿಹಾರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ.

ದೇಶಾದ್ಯಂತ ಮತಗಳ್ಳತನ ನಡೆದಿದೆ ಎಂಬ ಸುಳ್ಳು ಸುದ್ದಿ ಹರಡಿಸುವ ಮೂಲಕ ಅಪಪ್ರಚಾರದ ಅಭಿಯಾನ ಕೈಗೊಂಡ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಹುಲ್ ಗಾಂಧಿಗೆ ಬಿಹಾರ ಜನರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಸರ್ವನಾಶಕ್ಕೆ ರಾಹುಲ್ ಗಾಂಧಿ ಒಬ್ಬರೇ ಸಾಕು ಎಂದರು.

ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪ್ರಮುಖರಾದ ಶಂಕರ್ ಮೇಟಿ, ರೇವಣ್ಣ ಸಿದ್ದಪ್ಪ, ಉಮಾದೇವಿ, ಜಯಶ್ರೀ, ಪೂರ್ಣಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net