ಶಿಕ್ಷಣದಲ್ಲಿ ನೈತಿಕತೆಯ ಕೊರತೆಯನ್ನು ನೀಗಿಸುವ ಉದ್ದೇಶದಿಂದ, ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಕಲಿಕೆ ಮತ್ತು ಆಸಕ್ತಿ ಮೂಡಿಸಲು ಈ ವರ್ಷ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಅಭಿಯಾನದ ಅಂಗವಾಗಿ ನವೆಂಬರ್‌ನಲ್ಲಿ ಕಲಿಕಾ ಕಾರ್ಯಕ್ರಮಗಳು ಹಾಗೂ ಡಿಸೆಂಬರ್‌ನಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುವುದು. ಈ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆ ಆತಿಥ್ಯ ವಹಿಸಲಿದೆ ಎಂದರು.