ಕಾನಹೊಸಹಳ್ಳಿ: ಸುತ್ತಲಿನ ಬಹುತೇಕ ಹಳ್ಳಿಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸಂಜೆ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗಿದ್ದು, ರೈತರಿಗೂ ತೊಂದರೆಯಾಗಿದೆ. .ಗುಡುಗು-ಸಿಡಿಲಿನೊಂದಿಗೆ ಮಳೆಯಾದ ಕಾರಣ ಕಣಗಳಲ್ಲಿ ಒಕ್ಕಣೆ ಬೆಳೆಗಳು ನಾಶವಾಗಿವೆ. ಹಿರೇಕುಂಬಳಗುಂಟೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ವೀಳ್ಯದೆಲೆ ತೋಟಗಳು ನೆಲಕಚ್ಚಿವೆ. ಬಯಲು ತುಂಬರಗುದ್ದಿ, ಜುಟ್ಟಲಿಂಗನಹಟ್ಟಿ, ಹುಲಿಕೆರೆ ಗ್ರಾಮಗಳಲ್ಲಿ ಜಾನುವಾರುಗಳಿಗೆಂದು ಸಂಗ್ರಹಿಸಿಟ್ಟಿದ್ದ ಮೇವು ಹಾನಿಯಾಗಿದೆ.