ಮುಂಜಾಗ್ರತೆ ವಹಿಸಿ ಹೊಲದಲ್ಲಿ ಕೆಲಸ ಮಾಡಿ

ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ಕರಡಿ ದಾಳಿಯಿಂದ ಮೃತಪಟ್ಟ ಒಬಯ್ಯ ಪತ್ನಿ ಅಂಜಿನಮ್ಮಗೆ ಅರಣ್ಯ ಇಲಾಖೆಯ 20 ಲಕ್ಷ ರೂ. ಪರಿಹಾರದ ಚೆಕ್ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಸ್ತಾಂತರಿಸಿದರು.
ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ಕರಡಿ ದಾಳಿಯಿಂದ ಮೃತಪಟ್ಟ ಒಬಯ್ಯ ಪತ್ನಿ ಅಂಜಿನಮ್ಮಗೆ ಅರಣ್ಯ ಇಲಾಖೆಯ 20 ಲಕ್ಷ ರೂ. ಪರಿಹಾರದ ಚೆಕ್ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಸ್ತಾಂತರಿಸಿದರು.
Published on
ಕೂಡ್ಲಿಗಿ: ಮೇಕೆ ಮೇಯಿಸಲು ಹೋಗಿದ್ದಾಗ ಕರಡಿ ದಾಳಿಯಿಂದ ಸೋಮವಾರ ಮೃತಪಟ್ಟಿದ್ದ ಗುಡೇಕೋಟೆ ಬಳಿಯ ಹಾಲಸಾಗರ ಗ್ರಾಮದ ಓಬಯ್ಯ ಕುಟುಂಬಸ್ಥರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅರಣ್ಯ ಇಲಾಖೆಯ 20 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ವೈಯಕ್ತಿಕವಾಗಿ 50 ಸಾವಿರ ರೂಪಾಯಿಯನ್ನು ಓಬಯ್ಯ ಪತ್ನಿ ಅಂಜಿನಮ್ಮಗೆ ನೀಡಿ ಧೈರ್ಯ ತುಂಬಿದರು. ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದು, ಕುಟುಂಬಕ್ಕೆ ಅನ್ಯಾಯವಾಗಿದೆ. ಆದ್ದರಿಂದ ತಕ್ಷಣವೇ ಅರಣ್ಯ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿ ಪರಿಹಾರದ ಹಣ ನೀಡಲಾಗಿದೆ. ಬ್ಯಾಂಕ್‌ನಲ್ಲಿಟ್ಟು ಮುಂದಿನ ಜೀವನದ ಭದ್ರತೆಗೆ ಬಳಸಬೇಕು. ಓಬಯ್ಯ ಮಗನ ವಿದ್ಯಾಭ್ಯಾಸಕ್ಕೆ ಮಾಸಿಕ 4 ಸಾವಿರ ರೂ. ಬರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾಡಂಚಿನ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಇದ್ದು, ಸಾರ್ವಜನಿಕರು ಸ್ವಲ್ಪ ಎಚ್ಚರಿಕೆ ವಹಿಸಿ ಹೊಲಗಳಲ್ಲಿ ದೈನಂದಿನ ಕಾರ್ಯಗಳನ್ನು ಮುಂದುವರಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಆಹಾರ ಅಥವಾ ನೀರು ಕುಡಿಯಲು ಗ್ರಾಮಗಳತ್ತ ಕರಡಿಗಳು ಬರುವುದು ಸಹಜ ಆದ್ದರಿಂದ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಆರ್‌ಎಫ್‌ಒಗಳಾದ ಜಗದೀಶ್ ಮೇದ, ಸಂದೀಪ್ ನಾಯಕ, ಸಂಗನಾಯ್ಕ, ಹಾಲೇಶ್, ಪ್ರಮುಖರಾದ ಎಸ್.ವೆಂಕಟೇಶ್, ಮಂಜುನಾಥ್, ವೀರೇಶ್, ಜಿ.ಎಂ.ಬಸಣ್ಣ, ಕೆಇಬಿ ಗೋವಿಂದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ, ಹರವದಿ ಈರಣ್ಣ, ಜಿ.ನಾಗೇಂದ್ರಪ್ಪ. ಜಿ.ಮಹದೇವಪ್ಪ, ಕೆ.ಎಂ.ಹೊನ್ನೂರಪ್ಪ, ಮಾರೇಶ್, ಜಿ ತಿಪ್ಪೇಸ್ವಾಮಿ, ಹುಲಿರಾಜ್. ಭಂಡಾರಿ ಕೃಷ್ಣಪ್ಪ, ಪಂಪ ನಾಯ್ಕ. ಜುಂಜ ನಾಯ್ಕ, ಬಿ.ಆಂಜನೇಯ, ತಿಪ್ಪೇಸ್ವಾಮಿ ಪೇಂಟ್, ಉಮೇಶ್ ನಾಯ್ಕ, ನಾಗರಾಜ್ ವಾಟಾಳ್, ಸಂಜೀವಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net